ಉಗ್ರರಿಗೆ ನೆರವು ನೀಡಿದ ಶಂಕೆ ಹಿನ್ನೆಲೆಯಲ್ಲಿ ಗಡಿ ಬಳಿ ಪಾಕ್ ಬಾಲಕನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Border--001

ಜಮ್ಮು, ಮೇ 6-ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ದಾಟಲು ಯತ್ನಿಸಿದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದ 12 ವರ್ಷದ ಬಾಲಕನೊಬ್ಬನನ್ನು ಸೇನೆ ಬಂಧಿಸಿದೆ. ಭಾರತದೊಳಗೆ ನುಸುಳಲು ಇರುವ ಮಾರ್ಗಗಳು ಮತ್ತು ಯೋಧರ ಪಹರೆ ಬಗ್ಗೆ ತಿಳಿಯಲು ಭಯೋತ್ಪಾದಕರೊಂದಿಗೆ ಈತನನ್ನು ಪಾಕಿಸ್ತಾನಿ ಸೇನೆ ಅಥವಾ ಉಗ್ರರು ಕಳುಹಿಸಿರಬಹುದೆ ಎಂದು ಸೇನಾಪಡೆ ಶಂಕಿಸಿದೆ.   ಪಾಕ್ ಆಕ್ರಮಿತ ಕಾಶ್ಮೀರದಿಂದ ಒಳನುಸುಳಲು ಯತ್ನಿಸುತ್ತಿದ್ದ 12 ವರ್ಷ ಬಾಲಕನ್ನು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಭಾರತೀಯ ಸೇನೆ ಬಂಧಿಸಿದೆ.



 

ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‍ನಲ್ಲಿ ನಿನ್ನೆ ಮಧ್ಯರಾತ್ರಿ ಎಲ್‍ಒಸಿ ದಾಟುತ್ತಿದ್ದಾಗ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ. ಬಂಧಿತ ಬಾಲಕನನ್ನು ಅಷ್ಫಾಖ್ ಅಲಿ ಚೌಹಾಣ್ ಎಂದು ಗುರುತಿಸಲಾಗಿದೆ. ಈತ ಪಿಒಕೆಯ ದಂಗೆರ್ ಪೆಲ್ ಗ್ರಾಮದ ನಿವೃತ್ತ ರೆಜಿಮೆಂಟ್ ಯೋಧನೊಬ್ಬನ ಮಗ. ಬಾಲಕನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin