4ನೇ ಮಹಡಿಯಿಂದ ಹಾರಿ ಸಿವಿಲ್ ಎಂಜಿನಿಯರ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

house-floor-jumping

ಬೆಂಗಳೂರು, ಮೇ 6-ಸಿವಿಲ್ ಎಂಜಿನಿಯರ್ ಒಬ್ಬರು 4ನೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಪಂಜಾಬ್‍ನವರಾದ ಕರಣ್ ಬೀರೆ (34) ಆತ್ಮಹತ್ಯೆ ಮಾಡಿಕೊಂಡವರು. ಸಿವಿಲ್ ಎಂಜಿನಿಯರ್ ಆಗಿರುವ ಕರಣ್ ಹರಳೂರು ಮುಖ್ಯರಸ್ತೆಯಲ್ಲಿನ ಸಾಯಿಪುರ್ ಹೈ ಎಂಡ್ ಪಾಯಿಂಟ್ ಅಪಾರ್ಟ್‍ಮೆಂಟ್‍ನ 1ನೆ ಮಹಡಿ ಮನೆಯಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ರಾತ್ರಿ 11.50ರ ಸುಮಾರಿನಲ್ಲಿ 4ನೆ ಮಹಡಿ ಟೆರೆಸ್‍ಗೆ ತೆರಳಿ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬೆಳ್ಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin