ಒಂದೇ ಕುಟುಂಬದ 6 ಮಂದಿಗೆ ಬಡಿದ ಸಿಡಿಲು…!

ಈ ಸುದ್ದಿಯನ್ನು ಶೇರ್ ಮಾಡಿ

thunderstorm

ತಿಪಟೂರು, ಮೇ 7- ನಿನ್ನೆ ಸುರಿದ ಮಳೆ ವೇಳೆ ಸಿಡಿಲು ಬಡಿದು ಒಂದೇ ಕುಟುಂಬದ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.  ಶಂಕರಯ್ಯ (50), ಗೋಪಾಲಪುರ ಗ್ರಾಮದ ಲಕ್ಷ್ಮೀದೇವಮ್ಮ (45), ಬಗ್ಗನಹಳ್ಳಿ ಗ್ರಾಮದ ಮಲ್ಲೇಶ್ (35), ಪದ್ಮ (28), ಯಶ್ವಂತ್ (13), ಕಲ್ಪಶ್ರೀ (9)ನೊಣವಿನಕೆರೆ ಗ್ರಾಮದ ಗಿರಿಜ (28)ರವರಿಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.  ಗಾಯಾಳುಗಳೆಲ್ಲರೂ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸವಕ್ಕಾಗಿ ಆಲೂರು ಗ್ರಾಮಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಬಿಸಿಲಿನ ತಾಪಕ್ಕೆ ತೆಂಗಿನ ತೋಟಕ್ಕೆ ಎಳನೀರು ಕುಡಿಯಲು ತೆರಳಿದ್ದರು.ತುಂತುರು ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ತೋಟದಲ್ಲಿಯೇ ಇದ್ದ ಗುಡಿಸಲ ಒಳಗಡೆಗೆ ತೆರಳಿದ್ದಾರೆ. ಕೆಲ ಸಮಯದ ನಂತರ ಮಳೆ ಜೋರಾಗುತ್ತಲೇ ಗುಡಿಸಲಿಗೆ ಸಿಡಿಲು ಬಡಿದಿದೆ. ಸಿಡಿಲಿನ ಅಬ್ಬರಕ್ಕೆ ಎಲ್ಲರೂ ಸ್ಥಳದಲ್ಲಿಯೇ ಪ್ರe್ಞÉ ತಪ್ಪಿದ್ದಾರೆ. ಕೆಲ ಸಮಯದ ನಂತರ ಮಲ್ಲೇಶ ಎಂಬುವರಿಗೆ ಎಚ್ಚರವಾಗಿ ಗ್ರಾಮದ ಇತರರಿಗೆ ತಿಳಿಸಿದಾಗ ತಕ್ಷಣ 108 ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿ ಕೂಡಲೇ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯಕ್ಕೆ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin