ಕೆಂಗೇರಿಯ ಮನೆಯೊಂದರ ಕಬೋರ್ಡ್‍ನಲ್ಲಿತ್ತು ಕೊಳೆತ ಶವ..!

ಈ ಸುದ್ದಿಯನ್ನು ಶೇರ್ ಮಾಡಿ

Kengeri-Murder

ಬೆಂಗಳೂರು,ಮೇ7- ಖಾಲಿ ಮನೆಯೊಂದರ ಕಬೋರ್ಡ್‍ನಲ್ಲಿ ಕೊಳೆತ ಶವ ಪತ್ತೆಯಾಗಿದ್ದು , ಈ ವಿಷಯ ತಿಳಿದು ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಇಂದು ಕೆಂಗೇರಿ ಉಪನಗರದಲ್ಲಿ ನಡೆದಿದೆ. ಈ ಬಗ್ಗೆ ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.   ಘಟನೆ ವಿವರ: ಕೆಂಗೇರಿ ಉಪನಗರದ ಗಾಂಧಿನಗರದಲ್ಲಿ ನವೀನ್ ಅವರು ಮನೆ ಹೊಂದಿದ್ದು ಸಂಜಯ್ ಎಂಬುವರಿಗೆ ಬಾಡಿಗೆಗೆ ಕೊಟ್ಟಿದ್ದರು. 2016ರ ಮೇ ತಿಂಗಳಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಸಂಜಯ್ ಜೊತೆಯಲ್ಲಿ ವಯಸ್ಸಾದ ಮಹಿಳೆಯರು ವಾಸವಾಗಿದ್ದರು ಎಂದು ಮಾಲೀಕ ನವೀನ್ ಪೊಲೀಸರಿಗೆ ತಿಳಿಸಿದ್ದಾರೆ.



ಫೆಬ್ರವರಿ ತಿಂಗಳಿನಲ್ಲಿ ಸಂಜಯ್ ಮನೆಗೆ ಬೀಗ ಹಾಕಿ ಹೋಗಿದ್ದು ಈವರೆಗೂ ವಾಪಸ್ ಆಗಿಲ್ಲ. ನಿನ್ನೆಗೆ ಬಾಡಿಗೆ ಕರಾರು ಅವಧಿ ಮುಗಿದಿದ್ದು ,ಇಂದು ಮಾಲೀಕ ನವೀನ್ ಅವರು ಬಾಗಿಲು ಒಡೆದು ಒಳ ಹೋದಾಗ ದುರ್ವಾಸನೆ ಬಂದಿದೆ. ಮನೆಯೊಳಗೆ ಪರಿಶೀಲಿಸಿದಾಗ ಸೀಮೆಂಟ್‍ನಿಂದ ಕಬೋರ್ಡ್‍ವೊಂದನ್ನು ನಿರ್ಮಿಸಿದ್ದು ಪಕ್ಕದಲ್ಲೇ ಪ್ಲಾಸ್ಟಿಕ್ ಡ್ರಮ್ ಸಹ ಇರುವುದು ಪತ್ತೆಯಾಗಿದೆ. ಅನುಮಾನದಿಂದ ಪೊಲೀಸರಿಗೆ ದೂರು ನೀಡಿದ್ದಾರೆ.   ಸ್ಥಳಕ್ಕೆ ಧಾವಿಸಿದ ಪೊಲೀಸರು ಕಬೋರ್ಡ್ ಒಡೆದು ಪರಿಶೀಲಿಸಿದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾಗಿದೆ. ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನಾಪತ್ತೆಯಾಗಿರುವ ಸಂಜಯ್‍ಗಾಗಿ ಶೋಧ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin