ಯಡಿಯೂರಪ್ಪ-ಈಶ್ವರಪ್ಪರನ್ನು ಒಂದುಮಾಡಲು ರಾತ್ರಿಯೆಲ್ಲಾ ನಡೆಯಿತು ಕಸರತ್ತು..!

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-Yadiyurappa

ಬೆಂಗಳೂರು, ಮೇ 7- ಹೈಕಮಾಂಡ್ ಆದೇಶದಂತೆ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಡುವೆ ಮೈಸೂರಿನಲ್ಲಿ ರಾಜಿಸಂಧಾನ ಪ್ರಯತ್ನ ನಡೆದಿದೆ. ರಾಮ-ಲಕ್ಷ್ಮಣರಂತಿದ್ದ ಈಶು-ಬಿಎಸ್‍ವೈ ಭಿನ್ನಮತದಿಂದ ಉತ್ತರ-ದಕ್ಷಿಣ ಧೃವದಂತಾಗಿದ್ದಾರೆ. ರಾಜ್ಯ ಕಾರ್ಯಕಾರಿಣಿಯಲ್ಲಿ ಒಬ್ಬರ ಮುಖವನ್ನೊಬ್ಬರು ನೋಡಲಿಲ್ಲ.   ಹೀಗಾಗಿ ಹೈಕಮಾಂಡ್ ಸೂಚನೆಯಂತೆ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷರಾಗಿರುವ ಪುರಂದರೇಶ್ವರಿ ಹಾಗೂ ಪಕ್ಷದ ಉಸ್ತುವಾರಿ ಮುರಳೀಧರ್ ರಾವ್ ಅವರು ನಿನ್ನೆ ರಾತ್ರಿ ಖಾಸಗಿ ಹೊಟೇಲ್‍ನಲ್ಲಿ ಈ ಇಬ್ಬರ ನಡುವೆ ಸಂಧಾನದ ಮಾತುಕತೆ ನಡೆಸಿದ್ದಾರೆ.ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪೂರಕ ವಾತಾವರಣವಿದೆ. ವೈಮನಸ್ಸುಗಳನ್ನುಮರೆತು ನಾಯಕರುಗಳು ಒಂದಾಗಿ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೆಂಬ ಸಲಹೆಗೆ ಇಬ್ಬರು ಒಪ್ಪಿಕೊಂಡಂತೆ ಕಂಡುಬಂದಿದೆ. ಹೀಗಾಗಿ ತಾತ್ಕಾಲಿಕವಾಗಿ ಭಿನ್ನಮತ ಶಮನಗೊಂಡಿದೆ.   ಪದಾಧಿಕಾರಿಗಳ ನೇಮಕದ ಬಿಕ್ಕಟ್ಟಾಗಲಿ, ಸರ್ವಾಧಿಕಾರಿ ಧೋರಣೆಯ ಹೇಳಿಕೆಯಾಗಲಿ, ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಅಸಮಾಧಾನ, ಅತೃಪ್ತಿ ವಿಷಯಗಳು ಪಕ್ಷದ  ಚೌಕಟ್ಟಿನಲ್ಲಿ ಚರ್ಚೆಯಾಗಬೇಕು. ಶಿಸ್ತು, ಸಂಯಮಗಳನ್ನು ಉಲ್ಲಂಘಿಸಬಾರದು ಎಂಬ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇಂದು ಬೆಳಗ್ಗೆ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾಧ್ಯಮದವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿ, ಕೇಂದ್ರ ನಾಯಕರಿಂದ ಯಡಿಯೂರಪ್ಪ-ಈಶ್ವರಪ್ಪ ನಡುವೆ ಸಂಧಾನ ನಡೆದಿದೆ. ವೈಮನಸ್ಸು ನಿವಾರಣೆಯಾಗಲಿದೆ. ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಕಾರ್ಯಕಾರಿಣಿ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಬರ ಪರಿಸ್ಥಿತಿ ಅಧ್ಯಯನ ಮಾಡುತ್ತೇವೆ. ಸಾಲ ಮನ್ನಾ ಮಾಡುವ ಬಗ್ಗೆ ರಾಜ್ಯಸರ್ಕಾರದ ಗಮನಸೆಳೆಯುವಲ್ಲಿ ಪ್ರಯತ್ನ ನಡೆಸುತ್ತೇವೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin