ಎಗರಾಡಿದ ಬಿಜೆಪಿ ಶಾಸಕ, ಗಳಗಳನೆ ಅತ್ತ ಐಪಿಎಸ್ ಅಧಿಕಾರಿಣಿ

ಈ ಸುದ್ದಿಯನ್ನು ಶೇರ್ ಮಾಡಿ

IPS-Officer

ಗೋರಖ್‍ಪುರ್ (ಉತ್ತರಪ್ರದೇಶ), ಮೇ 8-ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸಕರೊಬ್ಬರ ಅವಾಜ್‍ಗೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಗಳಗಳನೆ ಅತ್ತ ಘಟನೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಲೋಕಸಭಾ ಕ್ಷೇತ್ರ ಗೋರಖ್‍ಪುರ್‍ನಲ್ಲಿ ವರದಿಯಾಗಿದೆ. ಉನ್ನತ ಪೊಲೀಸ್ ಅಧಿಕಾರಿಣಿಯಿಂದ ಕಣ್ಣೀರ ಕೋಡಿ ಹರಿದ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.ಘಟನೆ ವಿವರ :

ಗೋರಖ್‍ಪುರ್ ನಗರದ ಕರೀಂನಗರ ಪ್ರದೇಶದಲ್ಲಿದ್ದ ಮದ್ಯದಂಗಡಿಯನ್ನು ತೆರವುಗೊಳಿಸಲು ಆಗ್ರಹಿಸಿ ಕೆಲವು ಮಂದಿ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಲ್ ಇನ್ಸ್‍ಪೆಕ್ಟರ್ ಚಾರು ನಿಗಂ ತಮ್ಮ ಮೇಲೆ ಬಲಪ್ರಯೋಗ ಮಾಡಿ ಸ್ಥಳದಿಂದ ತೆರವುಗೊಳಿಸಿದರು ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಎಂಎಲ್‍ಎ ರಾಧಾ ಮೋಹನ್ ದಾಸ್ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಪ್ರತಿಭಟನಾನಿರತ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೇ 80 ವರ್ಷ ವೃದ್ಧೆಯನ್ನು ಎಳೆದಾಡಿದ್ದಾರೆ ಎಂದು ಅವರ ಬಳಿ ಕೆಲವರು ಆರೋಪಿಸಿದರು.

ಈ ಬಗ್ಗೆ ಅಲ್ಲಿದ್ದ ಐಪಿಎಸ್ ಅಧಿಕಾರಿಣಿಯನ್ನು ಶಾಸಕರು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾನಿರತರ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ ರಾಧಾ ಮೋಹನ್ ದಾಸ್ ನಿಮ್ಮ ಇತಿಮಿತಿಯನ್ನು ದಾಟಿ ದರ್ಪ ಪ್ರದರ್ಶಿಸಬೇಡಿ ಎಂದು ಕೂಗಾಡಿದರು. ಈ ಸಂದರ್ಭದಲ್ಲಿ ಮಹಿಳಾ ಅಧಿಕಾರಿ ಗಳಗಳನೆ ಅತ್ತು ಇನ್ಸ್‍ಪೆಕ್ಟರ್ ಬಳಿ ಇದ್ದ ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡರು. ಶಾಸಕರು ತಮ್ಮೊಂದಿಗೆ ದೌರ್ಜನ್ಯದಿಂದ ವರ್ತಿಸಿದ್ಧಾರೆ ಎಂದು ಆ ಅಧಿಕಾರಿ ಟ್ವೀಟ್‍ನಲ್ಲಿ ಆರೋಪಿಸಿದ್ದಾರೆ.   ಈ ಘಟನೆಗೆ ಕಾರಣವಾದ ಮದ್ಯದಂಗಡಿಯನ್ನು ನಂತರ ತೆರವುಗೊಳಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin