ಐಸಿಸಿ ಚಾಂಪಿಯನ್ ಟ್ರೋಫಿಗೆ ಟೀಮ್ ಇಂಡಿಯಾ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Team-India--01

ನವದೆಹಲಿ, ಮೇ 8-ಕನ್ನಡಿಗ ಮನೀಷ್‍ಪಾಂಡೆ ಸೇರಿದಂತೆ 15 ಆಟಗಾರರನ್ನೊಳಗೊಂಡ ಭಾರತ ತಂಡ ಪ್ರಕಟವಾಗಿದೆ.  ಜೂನ್ 1ರಿಂದ ಇಂಗ್ಲೆಂಡ್‍ನಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗೆ ನಾಯಕ ವಿರಾಟ್‍ಕೊಹ್ಲಿ ನೇತೃತ್ವದ ಯುವ ಸೇನೆ ಸಜ್ಜಾಗಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ರೋಹಿತ್‍ಶರ್ಮ, ವೇಗದ ಬೌಲರ್ ಮಹಮ್ಮದ್ ಶಮಿ ತಂಡಕ್ಕೆ ಮರಳಿದ್ದಾರೆ.  ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಮನೀಷ್‍ಪಾಂಡೆ ಅವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಅವರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದೆ. ಆದರೆ, ಕೆ.ಎಲ್.ರಾಹುಲ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಜೂನ್ 4ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ ಎದುರಿಸಲಿದೆ.ಭಾರತ ತಂಡ ಪ್ರಕಟ:
ವಿರಾಟ್‍ಕೊಹ್ಲಿ (ನಾಯಕ), ಶಿಖರ್‍ಧವನ್, ರೋಹಿತ್‍ಶರ್ಮ, ಮನೀಷ್‍ಪಾಂಡೆ, ಅಜಿಂಕ್ಯ ರಹಾನೆ, ಮಹೇಂದ್ರಸಿಂಗ್ ಧೋನಿ (ವಿಕೆಟ್‍ಕೀಪರ್), ಯುವರಾಜ್‍ಸಿಂಗ್, ಖೇದರ್ ಜಾದವ್, ಹಾರ್ದಿಕ್ ಪಾಂಡೆ, ಆರ್.ಅಶ್ವಿನಿ, ರವೀಂದ್ರಜಡೇಜ, ಮಹಮ್ಮದ್ ಶಮಿ, ಉಮೇಶ್‍ಯಾದವ್, ಭುವನೇಶ್ವರ್‍ಕುಮಾರ್, ಜಸ್ಪ್ರಿತ್ ಬುಮ್ರ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin