ಕೆಜಿಎಫ್‍ನ ಉರಿಗಾಂಪೇಟೆ ಬಳಿ 50 ರಿಂದ 70 ಅಡಿಯಷ್ಟು ಕುಸಿದ ಭೂಮಿ, ಜನರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

KGF-Land-Slinding--01

ಕೋಲಾರ, ಮೇ 8-ಜಿಲ್ಲೆಯ ಕೆಜಿಎಫ್‍ನ ಉರಿಗಾಂ ಬಳಿ ಅತಿ ಹೆಚ್ಚು ಮಳೆ ಬಿದ್ದಿದ್ದರಿಂದ ಭೂಕುಸಿತವಾಗಿದ್ದು, ಅಲ್ಲಿನ ಜನರಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಉರಿಗಾಂ ಪೇಟೆಯ ಮಂಜುನಾಥ ನಗರದಲ್ಲಿ ಸುಮಾರು 50 ರಿಂದ 70 ಅಡಿಯಷ್ಟು ಭೂ ಕುಸಿತವಾಗಿದ್ದು, ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆಜಿಎಫ್‍ನ ಬಿಜಿಎಂಎಲ್‍ನಲ್ಲಿ ಮೈನಿಂಗ್ ಮಾಡಿದ ಹಿನ್ನೆಲೆಯಲ್ಲಿ ಭೂ ಕುಸಿತವಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪ್ರಕೃತಿ ವಿಕೋಪ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin