ಗಿಡ ನೆಡುವ ಕಾರ್ಯ ನಿರಂತರವಾಗಿರಲಿ: ಚಂದ್ರಶೇಖರ್‍ನಾಯ್ಡು

ಈ ಸುದ್ದಿಯನ್ನು ಶೇರ್ ಮಾಡಿ

Gudibande

ಗುಡಿಬಂಡೆ, ಮೇ 8-ಭೂಮಿಯ ಮೇಲಿನ ಉಷ್ಣಾಂಶ ಹೆಚ್ಚಾಗಲು ಮರಗಳು ಕಡಿಮೆಯಾಗಿರುವುದೇ ಕಾರಣವಾಗಿದ್ದು, ಪ್ರತಿಯೊಬ್ಬರು ಗಿಡ ನೆಡುವ ಕಾರ್ಯವನ್ನು ನಿರಂತರವಾಗಿ ಮಾಡಬೇಕೆಂದು ಸ್ಥಳೀಯ ಪ.ಪಂ. ಅಧ್ಯಕ್ಷ ಚಂದ್ರಶೇಖರ್‍ನಾಯ್ಡು ತಿಳಿಸಿದರು. ಪಟ್ಟಣದ ಕನ್ನಡ ಸೇನೆ ಸಂಘದ ವತಿಯಿಂದ ರಾಮಪಟ್ಟಣ ರಸ್ತೆ ಬಳಿಯಿರುವ ಪಾರ್ಕ್‍ನಲ್ಲಿ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಜನ್ಮದಿನದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇತ್ತೀಚಿಗೆ ಮಿತಿ ಮೀರಿ ಉಷ್ಣಾಂಶ ಬೆಳೆಯುತ್ತಿದೆ. ಈ ಉಷ್ಣಾಂಶಕ್ಕೆ ಮೂಲ ಕಾರಣ ಪರಿಸರದ ನಾಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡ ನೆಡುವ ಕಾರ್ಯವನ್ನು ತಮ್ಮ ಮುಖ್ಯ ಜವಾಬ್ದಾರಿ ಎಂದು ಭಾವಿಸಬೇಕಿದೆ ಎಂದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಜನ್ಮದಿನ ಪ್ರಯುಕ್ತ ಕನ್ನಡ ಸೇನೆ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಪ.ಪಂ. ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಸದಸ್ಯರಾದ ರಿಯಾಜ್ ಪಾಷ, ರಮೇಶ್, ಮುಖಂಡರಾದ ಚಾಂದ್‍ಬಾಷ, ಜಿ.ಟಿ.ಶ್ರೀನಿವಾಸ್, ಇಸ್ಮಾಯಿಲ್ ಆಜಾದ್, ನಾಗರಾಜ್, ಬಾಗೇಪಲ್ಲಿ ಗ್ರೀನ್ ಇಂಡಿಯಾ ಪೋರಂನ ಪ್ರಶಾಂತ್, ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಅಂಬರೀಶ್, ಫಯಾಜ್, ಸಂಜಯ್, ಸಚಿನ್, ಎಸ್.ಬಿ.ಎಸ್. ಗ್ರೀನ್ ವಾರಿಯರ್ಸ್‍ನ ತಂಡದ ಆರ್.ಬಾಲಾಜಿ, ಗಂಗಾಧರ್, ಮಂಜುನಾಥ್, ನಾಗೇಂದ್ರಬಾಬು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin