ತುರುವೇಕೆರೆಯಲ್ಲಿ 100 ಕ್ಕೂ ಹೆಚ್ಚು ಯುವಕರು ಜೆಡಿಎಸ್‍ಗೆ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

turuve
ತುರುವೇಕೆರೆ, ಮೇ 8-ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ 100 ಕ್ಕೂ ಮೇಲ್ಪಟ್ಟ ಯುವಕರಿಗೆ ಜೆಡಿಎಸ್ ಪಕ್ಷದ ಶಾಲು ನೀಡುವ ಮುಖಾಂತರ ಶಾಸಕ ಎಂ.ಟಿ.ಕೃಷ್ಣಪ್ಪ ನವರು ಪಕ್ಷಕ್ಕೆ ಯುವಶಕ್ತಿಯನ್ನು ಆತ್ಮೀಯವಾಗಿ ಸೇರ್ಪಡೆ ಮಾಡಿಕೊಂಡರು. ಮಾದೀಹಳ್ಳಿ ಕಾಂತರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಪ್ಜಲ್ ಮಾತನಾಡಿನೇರ ನುಡಿ ಹಾಗೂ ದಿಟ್ಟ ಹೋರಾಟಗಾರರಾದ ಎಂ.ಟಿ. ಕೃಷ್ಣಪ್ಪ ನಂತಹವರು ನಮ್ಮ ತಾಲೂಕಿಗೆ ಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಇಂದು ಜೆಡಿಎಸ್‍ಗೆ ಬೆಂಬಲಿಸುವ ಮೂಲಕ ಮತ್ತೊಮ್ಮೆ ಶಾಸಕರಾಗಿ ಆರಿಸಿ ಕಳುಹಿಸುವ ಜೊತೆಗೆ ಅವರನ್ನು ಸಚಿವರನ್ನಾಗಿ ನೋಡಬೇಕೆಂಬುದೇ ನಮ್ಮೆಲ್ಲರ ಗುರಿ ಎಂದರು.ಕಾಂತರಾಜು ಮಾತನಾಡಿ ನಮ್ಮ ಹಾಲಿ ಶಾಸಕರು 3 ಬಾರಿ ಶಾಸಕರಾಗಿದ್ದು ಅವರ ಅವಧಿಯಲ್ಲಿ ನಮ್ಮ ತಾಲೂಕಿನಾದ್ಯಂತ ಅಭೂತಪೂರ್ವ ಕೆಲಸಗಳಾಗಿದ್ದು ಮುಂದಿನ ಚುನಾವಣೆಯಲ್ಲಿಯೂ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮುಖಾಂತರ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರೊಂದಿಗೆ ನಮ್ಮ ಶಾಸಕರು ಸಚಿವರಾಗಲಿದ್ದಾರೆ. ಆ ನಿಟ್ಟಿನಲ್ಲಿ ಯುವಪಡೆ ಜೆಡಿಎಸ್ ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬೆಂಬಲ ನೀಡುತ್ತಿದ್ದೇವೆ ಎಂದರು.
ಪಕ್ಷದ ಚಿಹ್ನೆಯ ಶಾಲು ಹೊದಿಸಿ ಆತ್ಮೀಯತೆಯಿಂದ ಪಕ್ಷಕ್ಕೆ ಬರಮಾಡಿಕೊಂಡ ಶಾಸಕರು ಮಾತನಾಡಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲದ್ದು, ಒಂದೆಡೆಯಾದರೆ ರೈತಪರ ಕಾಳಜಿ, ನಿರುದ್ಯೋಗ ನಿವಾರಣೆ, ಯುವಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅನೇಕ ಜನಪರ ಕಾಳಜಿ ಹೊಂದಿರುವ ಹೆಚ್.ಡಿ. ಕುಮಾರಸ್ವಾಮಿಯವರನ್ನು ಸಿ.ಎಂ. ಮಾಡಲೇಬೇಕೆಂಬ ಉದ್ದೇಶದಿಂದ ತಾಲೂಕಿನಾದ್ಯಂತ ಜೆಡಿಎಸ್‍ನತ್ತ ಮತದಾರರ ಒಲವು ಹೆಚ್ಚಾಗುತ್ತಿದೆ ಎಂದರು.
ಪ.ಪಂ. ಸದಸ್ಯ ವಿಜಯ್‍ಕುಮಾರ್,ಎಪಿಎಮ್‍ಸಿ ಮಾಜಿ ಅಧ್ಯಕ್ಷ ಬಸವರಾಜು, ಮುಖಂಡರಾದ ದಯಾನಂದ್,ಶಹಜಹಾನ್, ಮಾಣಿಕ್ ಪಾಷಾ, ಫಯಾಜ್, ಅಬ್ದುಲ್ ಸೇರಿದಂತೆ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin