ನಕ್ಸಲ್ ನಿಗ್ರಹಕ್ಕೆ 10 ರಾಜ್ಯಗಳು ಒಗ್ಗೂಡಲು ರಾಜನಾಥ್ ಸಿಂಗ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Rajanath-Singh--01

ನವದೆಹಲಿ,ಮೇ 8-ಪೂರ್ಣ ಬಲ ಮತ್ತು ಹೊಸ ಕಾರ್ಯತಂತ್ರಗಳಿಂದ ಶಸ್ತ್ರಸಜ್ಜಿತ ಕ್ರೂರ ನಕ್ಸಲೀಯರನ್ನು ಮಟ್ಟ ಹಾಕುವುದಾಗಿ ಘೋಷಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಎಲ್ಲ ನಕ್ಸಲ್‍ಪೀಡಿತ ರಾಜ್ಯಗಳು ಈ ಉದ್ದೇಶಕ್ಕಾಗಿ ಒಗ್ಗೂಡುವಂತೆ ಕರೆ ನೀಡಿದ್ದಾರೆ. ಬಂದೂಕು ತೋರಿಸಿ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಪಡಿಸಿ ಪ್ರಜಾಪ್ರಭುತ್ವ ಕತ್ತುಹಿಸುಕುತ್ತಿರುವ ಮಾವೋವಾದಿಗಳ ಯತ್ನಗಳನ್ನು ವಿಫಲಗೊಳಿಸಲು ನಿರ್ಣಾಯಕ ಮತ್ತು ಏಕೀಕೃತ ವ್ಯವಸ್ಥೆಯೊಂದನ್ನು ರೂಪಿಸುವಂತೆಯೂ ಅವರು ಸಲಹೆ ಮಾಡಿದ್ದಾರೆ.   ನಕ್ಸಲ್‍ಪೀಡಿತಹತ್ತು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉನ್ನತಾಧಿಕಾರಿಗಳ ಎರಡು ದಿನಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೆರಿಲ್ಲಾ ದಾಳಿಗಳನ್ನು ಹತ್ತಿಕ್ಕಲು ಅಗತ್ಯವಾದ ಅನೇಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ನಕ್ಸಲರ ಹಣಕಾಸು ಮೂಲಗಳನ್ನು ಬಂದ್ ಮಾಡುವಂಥ ತಕ್ಷಣದ ಕ್ರಮಗಳನ್ನು ಅನುಸರಿಸಬೇಕಿದೆ ಎಂದರು.



ಕಳೆದ 20 ವರ್ಷಗಳ ಅವಧಿಯಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ 12,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಸಚಿವರು ತಿಳಿಸಿದರು.   ಮಾವೋವಾದಿಗಳ ಅಡಗುತಾಣಗಳನ್ನು ಪತ್ತೆ ಮಾಡಲು ಮಾನವರಹಿತ ವಿಮಾನಗಳ(ಯುಎವಿಗಳು) ಸೇವೆಗಳನ್ನು ಬಳಸಿಕೊಳ್ಳಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದರು.   ಛತ್ತೀಸ್‍ಗಢ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ , ತೆಲಂಗಾಣ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳನ್ನು ಈ ಮಹತ್ವದ ಸಭೆಗೆ ಆಹ್ವಾನಿಸಲಾಗಿದೆ. ಗೃಹ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ನಕ್ಸಲ್ ದಮನಕ್ಕೆ ಕೈಗೊಳ್ಳಬೇಕಾದ ನಿಗ್ರಹ ಕಾರ್ಯುತಂತ್ರಗಳ ಕುರಿತು ಸಮಾಲೋಚನೆ ನಡೆಸಿದರು. ಸಿಆರ್‍ಪಿಎಫ್‍ನ 25 ಯೋಧರ ಮಾರಣಹೋಮವಾದ ಎರಡು ವಾರಗಳ ನಂತರ ನಡೆಯುತ್ತಿರುವ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

ಒಂಭತ್ತು ನಕ್ಸಲ್ ಮುಖಂಡರ ಸೆರೆ:

ಮಹತ್ವದ ಕಾರ್ಯಾಚರಣೆಯಲ್ಲಿ 9 ಮಾವೋವಾದಿ(ಕೆಂಪು ಬಣ) ಬಂಡುಕೋರರು ಭದ್ರತಾಪಡೆಯ ಬಲೆಗೆ ಸಿಕ್ಕಿಬಿದ್ದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಳೆದ ವಾರ ನಾಲ್ವರು ಕುಪ್ರಸಿದ್ದ ಮುಖಂಡರನ್ನು ಬಂಧಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin