ನಾಡು-ನುಡಿ ಸಾಹಿತ್ಯಕ್ಕೆ ಕಸಾಪದಿಂದ ಅಪಾರ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

malavalli
ಮಳವಳ್ಳಿ, ಮೇ 8- ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ ಸಾಹಿತ್ಯ ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವ ಕೆಲಸ ಮಾಡಿಕೊಂಡು ಬರುತ್ತಿದ್ದು ನಾಡು-ನುಡಿಗೆ ಸಂಕಷ್ಟ ಎದುರಾದಾಗ ಸಾಕಷ್ಟು ಹೋರಾಟಗಳನ್ನು ಸಹ ಮಾಡುತ್ತಿದೆ ಎಂದು ಜಿಲ್ಲಾಧ್ಯಕ್ಷ ಸಿ.ಕೆ. ರವಿಕುಮಾರ್ ಹೇಳಿದರು.  ಪಟ್ಟಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಉದ್ಘಾಟಸಿ ಮಾತನಾಡಿದ ಅವರು, ಕನ್ನಡದ ಕೀರ್ತಿ ಹಬ್ಬಲು ಕನ್ನಡ ಹಲವಾರು ಮಹಾನೀಯರ ಕೊಡುಗೆ ಅಪಾರವಾಗಿದೆ. ಇದುವರೆಗೂ ಸುಮಾರು 82 ಸಾಹಿತ್ಯ ಸಮೇಳನಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ಹತ್ತಾರು ದಶಕಗಳಿಂದಲೂ ಕನ್ನಡ ನಾಡಿ-ನುಡಿ ಸಾಹಿತ್ಯ-ಸಂಸ್ಕøತಿಯನ್ನು ಉಳಿಸಿಬೆಳೆಸುವ ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ ಎಂ. ವಿಶ್ವೇಶ್ವರಯ್ಯನವರು ಕೊಡುಗೆ ಸಾಕಷ್ಟಿದೆ. ಕನ್ನಡ ಸಾಹಿತ್ಯ ಪರಿಷತ್ತು ಎಂಬ ಹೆಸರು ಬರುವ ಮೊದಲು ಇದನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಕರೆಯಲಾಗುತ್ತಿತ್ತ್ತು ಎಂದು ಹೇಳಿದರು. ಎಲ್ಲೆಡೆ ಕನ್ನಡ ಕೃತಿಗಳನ್ನು ಬಿಡುಗಡೆ ಮಾಡಿ ಓದುಗರಲ್ಲಿ ಆಸ್ತಕಿ ಮೂಡುವಂತೆ ಮಾಡಿದ್ದಾರೆ. ಇದರೊಂದಿಗೆ ಕನ್ನಡ ಕಲಿಕೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಆದರೆ ಇತ್ತೀಚಿನ ತಂತ್ರಜ್ಞಾನದ ಭರಾಟೆಯಿಂದಾಗಿ ಸಾಹಿತ್ಯ ಪುಸ್ತಕಗಳನ್ನು ಓದುವವರ ಸಂಖ್ಯೆ ವಿರಳವಾಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು. ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭ್ಯಾಸಗಳನ್ನು ಮೂಡಿಸುವ ಕೆಲಸ ಪರಿಷತ್ತು ಮಾಡಬೇಕು ಎಂದು ಹೇಳಿದರು.  ತಾಲೂಕು ಅಧ್ಯಕ್ಷ ಶಿವಮಾದೇಗೌಡ, ಬಿಇಓ ಭೀಮನಾಯಕ್, ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಚೌಡೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin