ಫೇಸ್‍ಬುಕ್‍ನಲ್ಲಿ ಎನ್.ಆರ್.ರಮೇಶ್ ಗೆ ಜೀವಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

NR-Ramehs--01

ಬೆಂಗಳೂರು, ಮೇ 8- ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರಿಗೆ ಹರೀಶ್ ತಲಹರಿ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ.  ಲೋ ರಮೇಶ ನಿಂದು ಜಾಸ್ತಿ ಆಯ್ತು. ಹೀಗೆ ಆದ್ರೆ ನೀನು ಕೊಲೆ ಆಗ್ತೀಯಾ ಎಂದು ತಲಹರಿ ಫೇಸ್‍ಬುಕ್‍ನಲ್ಲಿ ಈ ರೀತಿ ಅಪ್‍ಲೋಡ್ ಮಾಡಿದ್ದಾರೆ. ನೀನು ಬರಿ ಕಾಂಗ್ರೆಸಿಗರ ಹಗರಣವನ್ನು ಹೊರಗೆ ತರಲು ಹೊರಟಿದ್ದೀಯಾ, ನಾವು ಕೆಲಸ ಕೊಟ್ಟರೆ ನೀನು ಎಲ್ಲಿ ಎದ್ದೀಯಾ ಎಂಬುದನ್ನು ಸರ್ಚ್ ಕೂಡ ಮಾಡಕ್ಕಾಗಲ್ಲ ಎಂದು ದಮ್ಕಿ ಹಾಕಿದ್ದಾನೆ. ಈ ಬೆದರಿಕೆ ಸಂದೇಶ ಕುರಿತಂತೆ ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ರಮೇಶ್ ಈ ಸಂಜೆ ಪತ್ರಿಕೆಗೆ ತಿಳಿಸಿದ್ದಾರೆ.



ಇತ್ತೀಚೆಗೆ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಭೂ ಅಕ್ರಮ ಕುರಿತಂತೆ ನೂರಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದು, ಇದರ ಬೆನ್ನಲ್ಲೇ ರಮೇಶ್ ಅವರಿಗೆ ಬೆದರಿಕೆ ಸಂದೇಶ ಬಂದಿದ್ದು, ಇದು ಪಾಲಿಕೆಯಲ್ಲಿ ತಲ್ಲಣ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ರಮೇಶ್ ಅವರಿಗೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕೂಡಲೇ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin