ಬಾಂಬ್ ನಾಗ ಶರಣಾಗತಿ..?

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು,ಮೇ 8- ತಲೆಮರೆಸಿಕೊಂಡಿರುವ ಕಿಡ್ನಾಪ್ ಮತ್ತು ಸುಲಿಗೆ ಪ್ರಕರಣದ ಆರೋಪಿ  ಪಾಲಿಕೆಯ ಮಾಜಿ ಸದಸ್ಯ ವಿ.ನಾಗರಾಜ್ ಪೊಲೀಸರಿಗೆ ಶರಣಾಗಲು ಸಿದ್ಧತೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಜಾಮೀನು ಸಿಗದ ಕಾರಣ ನಾಳೆ ಸಂಜೆಯೊಳಗೆ ಶರಣಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.   ಒಂದು ತಿಂಗಳ ಹಿಂದೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿದಾಗಿನಿಂದ ತಲೆಮರೆಸಿಕೊಂಡಿರುವ ನಾಗರಾಜ ಹಾಗೂ ಆತನ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿ ದಿನಕ್ಕೊಂದು ಊರು ಸಂಚರಿಸುತ್ತಿದ್ದಾರೆ.



ಈ ಮಧ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನಾಗರಾಜನ ಮೂವರು ಸಹಚರರನ್ನು ಹಾಗೂ ನಾಗನಿಗೆ ನಕಲಿ ಸಿಮ್ ಸರಬರಾಜು ಮಾಡುತ್ತಿದ್ದ ಸಂಬಂಧಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸಂಬಂಧಿಯ ಬಂಧನದಿಂದ ನಾಗರಾಜ ಪರಾರಿಯಾಗುವಾಗ ತನ್ನೊಂದಿಗೆ ಐದು ಕೋಟಿ ಹಣ ಹೊತ್ತೊಯ್ದಿರುವುದು ಗೊತ್ತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin