ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ

ಈ ಸುದ್ದಿಯನ್ನು ಶೇರ್ ಮಾಡಿ

Bellandur-lake

ಬೆಂಗಳೂರು,ಮೇ 8-ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆಯ ಸಮಸ್ಯೆ ಉದ್ಭವಿಸಿದೆ.  ಯಮಲೂರು ಕೋಡಿಯಲ್ಲಿ ಹೆಚ್ಚಿನ ನೊರೆ ಕಾಣಿಸಿಕೊಂಡಿದ್ದು , ಕೆರೆಯ ಸುತ್ತಮುತ್ತಲೂ ದುರ್ವಾಸನೆ ಬೀರುತ್ತಿದೆ. ಇತ್ತೀಚೆಗೆ ಕೆರೆ ಕಲುಷಿತಗೊಂಡಿರುವುದರಿಂದ ನೊರೆ ಪ್ರಮಾಣ ಹೆಚ್ಚಿದೆ ಎಂಬ ಕಾರಣಕ್ಕಾಗಿ ಕಾರ್ಖಾನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.   ಆದರೆ ನಿನ್ನೆ ರಾತ್ರಿ ಸುರಿದ ಮಳೆಗೆ ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯ ನೀರಿನಲ್ಲಿ ನೊರೆ ಪ್ರಮಾಣ ಹೆಚ್ಚಿದೆ. ಕೆರೆಯನ್ನು ಸ್ವಚ್ಛಗೊಳಿಸಲು ಆರಂಭಿಸಿರುವ ಕಳೆ ತೆಗೆವ ಕಾರ್ಯ ಭರದಿಂದ ಸಾಗುತ್ತಿದ್ದರೂ ನೊರೆ ಪ್ರಮಾಣ ಮಾತ್ರ ಯಾವುದೇ ರೀತಿಯಲ್ಲೂ ಕಡಿಮೆಯಾಗಿಲ್ಲ.  ನಿನ್ನೆ ಕೆರೆಯಲ್ಲಿ ಬೆಂಕಿ ಹತ್ತಿಕೊಂಡಿದ್ದು , ದಟ್ಟ ಹೊಗೆ ಸಹ ಆವರಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin