ಮೇ ಅಂತ್ಯಕ್ಕೆ ಮುಂಗಾರು ಆಗಮನ…?

ಈ ಸುದ್ದಿಯನ್ನು ಶೇರ್ ಮಾಡಿ

Rain---01

ಬೆಂಗಳೂರು,ಮೇ 8-ಕೇರಳ ರಾಜ್ಯದಲ್ಲಿ ಮೇ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿದ್ದು , ನೈರುತ್ಯ ಮುಂಗಾರು ಮಳೆ ಪ್ರಾರಂಭವಾಗಲಿದೆಯೇ ಅಥವಾ ವಿಳಂಬವಾಗುತ್ತದೆಯೇ ಎಂಬುದರ ಬಗ್ಗೆ ಇನ್ನು ಖಚಿತ ಸುಳಿವುಗಳಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮೇ ಅಂತ್ಯದ ವೇಳೆಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸುವುದು ವಾಡಿಕೆ. ಅದರಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಚಾಮರಾಜನಗರದ ಮೂಲಕ ರಾಜ್ಯವನ್ನು ಪ್ರವೇಶಿಸುವುದು ಕೂಡ ವಾಡಿಕೆ.   ಆದರೆ ಈ ಬಾರಿ ಮುಂಗಾರು ಸಕಾಲಕ್ಕೆ ಆರಂಭವಾಗಲಿದೆಯೇ ಅಥವಾ ವಿಳಂಬವಾಗುತ್ತದೆಯೇ ಎಂಬುದು ಇನ್ನು ಖಚಿತವಾಗಿಲ್ಲ. ಈಗಾಗಲೇ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಮುಂಗಾರು ಪೂರ್ವ ಮಳೆ ಮುಂದುವರೆದಿದೆ.



ಈ ತಿಂಗಳ ಅಂತ್ಯದವರೆಗೂ ಚದುರಿದಂತೆ ಅಲ್ಲಲ್ಲಿ ಅಕಾಲಿಕ ಮಳೆ ಬೀಳಲಿದೆ ಎಂಬುದು ಹವಾಮಾನ ತಜ್ಞರ ಅಭಿಮತ. ಈಗಿರುವ ಹವಾ ಮುನ್ಸೂಚನೆಗಳ ಪ್ರಕಾರ ಮೇ ಕೊನೆಯ ವಾರದಲ್ಲಿ ಕೇರಳ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಇವೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.   ಕೇರಳ ಮೂಲಕವೇ ಮುಂಗಾರು ಪ್ರವೇಶ ಮಾಡಲಿವೆ. ಈ ಬಾರಿಯ ಮುಂಗಾರು ಯಾವಾಗ ಪ್ರವೇಶವಾಗಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಮೇ 26 ಮತ್ತು 27ರ ವೇಳೆಗೆ ಕೇರಳ ಕರಾವಳಿ ಸೇರಿದಂತೆ ಕೇರಳ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಆ ಮಳೆ ಮುಂಗಾರು ಪ್ರಾರಂಭವೋ ಅಥವಾ ಮುಂದುವರೆದ ಪೂರ್ವ ಮುಂಗಾರು ಮಳೆಯೋ ಎಂಬುದನ್ನು ಕಾದು ನೋಡಬೇಕಿದೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin