36 ಸಾವಿರ ಬೋಗಸ್ ಮತದಾರರ ಪಟ್ಟಿ : ಸೊಗಡು ಶಿವಣ್ಣ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Sogadu-shivanna
ತುಮಕೂರು,ಮೇ 8-ಮಹಾನಗರ ಪಾಲಿಕೆಯ ಚುನಾವಣಾಧಿಕಾರಿಗಳು 36 ಸಾವಿರ ಬೋಗಸ್ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರದ ಉಪವಿಭಾಗಾಧಿಕಾರಿಗಳು ಮಹಾನಗರ ಪಾಲಿಕೆಯ ಆಯುಕ್ತರು , ಕಂದಾಯ ಅಧಿಕಾರಿಗಳು, ಬಿಎಲ್‍ಒ , ಬಾಂಗ್ಲಾದೇಶ- ಭಾರತದಿಂದ ಬಂದು ನೆಲೆಸಿರುವವರನ್ನು, ಬೇರೆ ತಾಲ್ಲೂಕಿನಲ್ಲಿರುವ ಅಲ್ಪಸಂಖ್ಯಾತರನ್ನು ಊರ್ಕೆರೆ ಗ್ರಾಮ ಪಂಚಾಯ್ತಿಗೆ ಸೇರಿದ ಭೋವಿಪಾಳ್ಯದ ಮತದಾರರನ್ನು ತುಮಕೂರು ನಗರದ ಮರಳೂರು ದಿಣ್ಣೆಯ ಭೂತ್‍ಗೆ ಸೇರಿಸಲಾಗಿದೆ ಎಂದು ದಾಖಲೆ ಸಮೇತ ಬಿಡುಗಡೆ ಮಾಡಿದರು.ಮತದಾರರ ಪಟ್ಟಿಗೆ ಬೋಗಸ್ ಮತದಾರರನ್ನು ಸೇರಿಸಲು ಇಲ್ಲಿನ ಶಾಸಕರೇ ನೇರ ಹೊಣೆಯಾಗಿದ್ದಾರೆ. ತುಮಕೂರು ವಿಧಾನಸಭಾ ಕ್ಷೇತ್ರದ 132 ಮತದಾರರ ಪಟ್ಟಿಯಲ್ಲಿ ಕಳೆದ ನಾಲ್ಕು ವರ್ಷಗಳ ಈಚೆಗೆ 33,300 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದ್ದು , ಇದರಲ್ಲಿ 15 ಸಾವಿರಕ್ಕೂ ಹೆಚ್ಚು ಮತದಾರರಿಗೆ ಯಾವುದೇ ದಾಖಲೆಗಳಲ್ಲದೇ ಸೇರ್ಪಡೆಗೊಳಿಸಲಾಗಿದೆ.

 

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಇಲಾಖೆಗೆ ನೇಮಿಸಿರುವ ಕೆಲವು ಬಿಎಲ್‍ಒಗಳು ಪ್ರತಿ ವರ್ಷ ನಡೆಯುವ ಈ ವಿಶೇಷ ಸಂಕ್ಷಿಪ್ತ ಪರಿಷ್ಕರ ಸಂದರ್ಭದಲ್ಲಿ ಮತದಾರರ ಸೇರ್ಪಡೆ ವೇಳೆ ಚುನಾವಣೆಯ ನಿಯಮ ಅನುಸರಿಸದೇ ಅಕ್ರಮ ಎಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.   ಇಲ್ಲಿ ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳಿಗೆ ತನಿಖೆ ಮಾಡಲು ಆದೇಶ ನೀಡಿದ್ದಾರೆ. ಕೆಲವು ಒತ್ತಡಗಳಿಂದ ಇಲ್ಲಿ ತನಿಖೆ ಪಾರದರ್ಶಕತೆವಾಗಿರುವುದು ಅನುಮಾನವಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin