ಐವರು ಬೈಕ್ ಕಳ್ಳರ ಬಂಧನ, 12 ದ್ವಿಚಕ್ರ ವಾಹನಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

bike-kallaru

ಬೆಂಗಳೂರು, ಮೇ 9- ಬೈಕ್‍ಗಳನ್ನು ಕದ್ದು ದರೋಡೆಗೆ ಹೊಂಚು ಹಾಕುತ್ತಿದ್ದ ಐವರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ 12 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.  ಚಾಮರಾಜಪೇಟೆಯ ಯತೀಶ್ ಅಲಿಯಾಸ್ ಡಿಂಗಾ(19), ಅಂಚೆಪಾಳ್ಯದ ಸೂರ್ಯ ಅಲಿಯಾಸ್ ಕೆರತ(19), ಕೆಂಪೇಗೌಡನಗರದ ಗಣೇಶ್‍ಶಾಸ್ತ್ರಿ ಅಲಿಯಾಸ್ ಶಾಸ್ತ್ರಿ(20), ಚಾಮರಾಜಪೇಟೆ ನಂಜಾಂಬ ಅಗ್ರಹಾರದ ಮಂಜುನಾಥ್ ಅಲಿಯಾಸ್ ಮೊಟ್ಟೆ (19) ಮತ್ತು ಅಂಚೆಪಾಳ್ಯದ ಗಿರೀಶ್ ಅಲಿಯಾಸ್ ಬಂಡೆ ಬಂಧಿತರು.  ಮತ್ತೊಬ್ಬ ಆರೋಪಿ ವಿನೋದ್ ಅಲಿಯಾಸ್ ತುರೆ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮೈಸೂರು ರಸ್ತೆಯ ಕುದುರೆ ಪಾರ್ಕ್ ಬಳಿ ಮಾರಕಾಸ್ತ್ರ ಇಟ್ಟುಕೊಂಡು ದರೋಡೆಗೆ ಹೊಂಚು ಹಾಕಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಚಾಮರಾಜಪೇಟೆ ಠಾಣೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತರು ನಗರದ ವಿವಿಧೆಡೆ ದ್ವಿಚಕ್ರವಾಹನಗಳನ್ನು ಕಳವು ಮಾಡಿಕೊಂಡು ಸಂಚರಿಸುತ್ತಾ ಒಂಟಿಯಾಗಿ ಓಡಾಡುವವರ ದರೋಡೆ ಮಾಡುತ್ತಿದ್ದಾರೆಂದು ವಿಚಾರಣೆಯಿಂದ ಗೊತ್ತಾಗಿದೆ.  ಇವರ ಬಂಧನದಿಂದ ಹನುಮಂತನಗರ, ಕೆಂಪೇಗೌಡನಗರ, ಮೈಕೋಲೇಔಟ್, ಕೋಣನಕುಂಟೆ, ಬ್ಯಾಟರಾಯನಪುರ, ಬಸವನಗುಡಿ ಹಾಗೂ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಗಳಲ್ಲಿನ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಡಿಸಿಪಿ ಎಂ.ಎನ್.ಅನುಚೇತ್ ಅವರ ಮಾರ್ಗದರ್ಶನ, ಎಸಿಪಿ ನಿರಂಜನ್‍ರಾಹ್ ಅರಸ್ ಅವರ ನೇತೃತ್ವದಲ್ಲಿ ಚಾಮರಾಜಪೇಟೆ ಠಾಣೆ ಇನ್ಸ್‍ಪೆಕ್ಟರ್ ಎಸ್.ಆರ್.ತನ್ವೀರ್, ಪಿಎಸ್‍ಐ ಕೆ.ಎಸ್.ಶಶಿಧರ್ ಮತ್ತು ಸಿಬ್ಬಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin