ಮೂವರು ಪರಿಷತ್ ಸದಸ್ಯರ ನೇಮಕ : ರಾಜಭವನಕ್ಕೆ ಸಿಎಂ ಭೇಟಿ, ರಾಜ್ಯಪಾಲರಿಗೆ ಶಿಫಾರಸ್ಸು

ಈ ಸುದ್ದಿಯನ್ನು ಶೇರ್ ಮಾಡಿ

List--Moha-Kondajji

ಬೆಂಗಳೂರು, ಮೇ 9-ಮೇಲ್ಮನೆಯ ಮೂವರು ನಾಮಕರಣ ಸದಸ್ಯರ ನೇಮಕಾತಿ ಶಿಫಾರಸ್ಸನ್ನು ಅಂಗೀಕಾರ ಮಾಡಬೇಕೆಂದು ರಾಜ್ಯಪಾಲರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.  ರಾಜಭವನಕ್ಕೆ ಇಂದು ಭೇಟಿ ನೀಡಿ ರಾಜ್ಯಪಾಲ ವಜೂಭಾಯಿ ವಾಲಾ ಅವರೊಂದಿಗೆ ಚರ್ಚೆ ನಡೆಸಿದ ಅವರು, ಮೇಲ್ಮನೆಗೆ ನಾಮನಿರ್ದೇಶಿತಗೊಂಡಿರುವ ಪಿ.ಆರ್.ರಮೇಶ್, ಕೊಂಡಜ್ಜಿ ಮೋಹನ್, ಸಿ.ಎಂ.ಲಿಂಗಪ್ಪ ಅವರ ಹೆಸರುಗಳ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.ಕಳೆದ ವಾರ ರಾಜ್ಯಸರ್ಕಾರ ಈ ಮೂವರ ಹೆಸರುಗಳನ್ನು ಶಿಫಾರಸು ಮಾಡಿ ರಾಜಭವನಕ್ಕೆ ರವಾನಿಸಿತ್ತು. ರಾಜ್ಯಪಾಲರು ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಬರ ನಿರ್ವಹಣೆ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ವರದಿ ಕೇಳಿದ್ದ ಹಿನ್ನೆಲೆಯಲ್ಲಿ ಆ ವರದಿಯನ್ನೂ ಕೂಡ ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin