2018-19ನೇ ಸಾಲಿನಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ.7.7 : ಐಎಂಎಫ್

ಈ ಸುದ್ದಿಯನ್ನು ಶೇರ್ ಮಾಡಿ

IMF--01

ವಾಷಿಂಗ್ಟನ್, ಮೇ 9-ನೋಟು ಅಮಾನ್ಯೀಕರಣದ ಪರಿಣಾಮಗಳ ನಂತರ ಭಾರತದ ಆರ್ಥಿಕ ಪ್ರಗತಿ 2017-18ನೇ ಹಣಕಾಸು ವರ್ಷದಲ್ಲಿ ಶೇ.7.2 ಹಾಗೂ 2018-10ನೇ ಸಾಲಿನಲ್ಲಿ ಶೇ.7.7ರಷ್ಟು ಪುಟಿಯುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇಂದು ವಿಶ್ಲೇಷಿಸಿದೆ. ಮಾರುಕಟ್ಟೆ ಸಾಮಥ್ರ್ಯ ವರ್ಧನೆಗಾಗಿ ದೀರ್ಘಾವಧಿ ಅಡೆತಡೆಗಳನ್ನು ನಿವಾರಿಸುವಂತೆಯೂ ಅದು ಸಲಹೆ ನೀಡಿದೆ.  ನಗದು ಕೊರತೆಗಳಿಂದಾಗಿ ತಾತ್ಕಾಲಿಕ ಅಡೆತಡೆಗಳಿಗೆ ಕಾರಣವಾಯಿತು. ಹಣಕಾಸು ಅಭಾವ ತಿಳಿಯಾದಂತೆ 2017ರಲ್ಲಿ ಅದು ಕ್ರಮೇಣ ಸುಧಾರಿಸಿತು. ಇದರಿಂದಾಗಿ ಭಾರತದ ಮುಂದಿನ ಆರ್ಥಿಕ ಪ್ರಗತಿ ಮತ್ತಷ್ಟು ಸುಧಾರಿಸಲಿದೆ ಎಂದು ಐಎಂಎಫ್ ತನ್ನ ಪ್ರಾದೇಶಿಕ ಆರ್ಥಿಕ ಮುನ್ನೋಟದಲ್ಲಿ ವಿವರಿಸಿದೆ.



ಇಂಥ ಎಡರುತೊಡರುಗಳು ಅಶಾದಾಯಕ ಮುಂಗಾರು ಋತುವಿನಿಂದ ಸಹ ನಿವಾರಣೆಯಾಗಲಿದೆ ಹಾಗೂ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳನ್ನು ನಿವಾರಿಸಿ ಪ್ರಗತಿಯತ್ತ ದಾಪುಗಾಲು ಹಾಕಲು ಸಹಕಾರಿಯಾಗಲಿದೆ ಎಂದು ಅದು ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin