ಈಡೇರದ ಬೇಡಿಕೆಗಳು, ಪೆಟ್ರೋಲ್-ಡೀಸೆಲ್ ಖರೀದಿಸದಿರಲು ಬಂಕ್ ಮಾಲೀಕರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Petrol-Bunk

ಬೆಂಗಳೂರು, ಮೇ 10-ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಇಂದಿನಿಂದ ಪೆಟ್ರೋಲ್-ಡೀಸೆಲ್ ಖರೀದಿಸದಿರಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದಾರೆ.
ಈ ಕುರಿತು ಪೆಟ್ರೋಲಿಯಂ ಡೀಲರ್ಸ್ ಅಧ್ಯಕ್ಷ ರವೀಂದ್ರನಾಥ್ ಹೇಳಿಕೆ ನೀಡಿದ್ದು, ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್, ಇಂಡಿಯನ್ ಆಯಿಲ್ ಕಂಪೆನಿಗಳು ಇಂಧನ ಖರೀದಿಸುವುದಿಲ್ಲ ಎಂದು ಹೇಳಿವೆ.  ಸರ್ಕಾರದ ಮುಂದೆ ಹಲವಾರು ನಮ್ಮ ಬೇಡಿಕೆಗಳನ್ನು ಮಂಡಿಸಿದ್ದರೂ ಯಾವುದೇ ರೀತಿಯ ಸ್ಪಂದನೆ ಈವರೆಗೆ ಸಿಕ್ಕಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. [ ಇದನ್ನೂ ಓದಿ :  ಬಂಕ್‍ಗಳನ್ನು ಬಂದ್ ಮಾಡಿ ಪೆಟ್ರೋಲ್ ಬಂಕ್ ಮುಷ್ಕರ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ  ]



ಸದ್ಯ ಇರುವ ಸ್ಟಾಕ್ ಮೂರ್ನಾಲ್ಕು ದಿನಗಳವರೆಗೆ ಲಭ್ಯವಾಗಲಿದೆ. ಭಾನುವಾರದಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಹಾಗಾಗಿ ಇಂದಿನಿಂದಲೇ ಪೆಟ್ರೋಲ್, ಡೀಸೆಲ್ ಖರೀದಿಸದಿರಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.  ಎಲ್ಲ ಬಂಕ್ ಮಾಲೀಕರು ಇಂದಿನಿಂದ ಪೆಟ್ರೋಲ್-ಡೀಸೆಲ್ ಖರೀದಿಸುವುದಿಲ್ಲ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin