ಕಾಶ್ಮೀರದಿಂದ ಭಯೋತ್ಪಾದನೆ ನಿರ್ಮೂಲನೆ ಮಾಡುತ್ತೇವೆ : ಜೇಟ್ಲಿ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

S-Arun-Jaitly

ನವದೆಹಲಿ, ಮೇ 10 – ಸೇನಾಧಿಕಾರಿ ಲೆಫ್ಟಿನೆಂಟ್ ಉಮರ್ ಫಯಾಜ್ ಅವರನ್ನು ಅಪಹರಿಸಿ, ಗುಂಡಿಕ್ಕಿ ಕೊಂದಿರುವ ಉಗ್ರರ ಕೃತ್ಯವನ್ನು ಹೇಡಿತನದ ಪ್ರತೀಕ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಭಯೋತ್ಪಾದಕರ ಕ್ರೌರ್ಯವನ್ನು ಉಗ್ರವಾಗಿ ಖಂಡಿಸಿರುವ ಅವರು, ಕಾಶ್ಮೀರ ಕಣಿವೆಯಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದಾಗಿ ಸಾರಿದ್ದಾರೆ. ಸೇನಾಧಿಕಾರಿ ಫಯಾಜ್ ಅವರು ಹುತಾತ್ಮರಾಗಿದ್ದಾರೆ. ಅವರ ತ್ಯಾಗವು ಭಯೋತ್ಪಾದನೆ ನಿರ್ಮೂಲನೆ ಮಾಡಬೇಕೆಂಬ ಭಾರತದ ಬದ್ಧತೆಯನ್ನೂ ಪುನರುಚ್ಚರಿಸುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin