ಬ್ರಿಟಿಷ್ ಕಲಾವಿದನ ಗೋವು ಪ್ರೇಮ

ಈ ಸುದ್ದಿಯನ್ನು ಶೇರ್ ಮಾಡಿ

cow

ಬ್ರಿಟಿಷ್ ಪೇಂಟರ್ ಜಾನ್  ಮಾರ್ಷಲ್‍ಗೆ ಗೋವು ಎಂದರೆ ವಿಶೇಷ ಪ್ರೀತಿ. ಕಳೆದ ಒಂದು ದಶಕದಿಂದಲೂ ತಮ್ಮ ಕುಂಚವನ್ನು ಹಸುಗಳ ವೈವಿಧ್ಯಮಯ ಕಲೆಗಾಗಿಯೇ ಮೀಸಲಿಟ್ಟಿರುವ ಮಾರ್ಷಲ್ ಗೋವಿನ ನೂರಾರು ಚಿತ್ರಗಳನ್ನು ಬಿಡಿಸಿ ಅವುಗಳಿಗೆ ಬಣ್ಣ ತುಂಬಿ ಖುಷಿ ಪಟ್ಟಿದ್ದಾರೆ. ಬನ್ನಿ ಈ ಅಪೂರ್ವ ಕಲಾವಿದನನ್ನು ಭೇಟಿ ಮಾಡೋಣ.ಇಂಗ್ಲೆಂಡ್‍ನ ವರ್ಣಚಿತ್ರ ಕಾರ ಜಾನ್  ಮಾರ್ಷಲ್ ದಶಕದಿಂದಲೂ ತಮ್ಮ ಕಲಾಸೇವೆಯನ್ನು ಗೋವಿ ಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಇವರ ಪೇಂಟಿಂಗ್‍ಗಳು ಸುಮಾರು ಎರಡು ಮೀಟರ್‍ಗಳಷ್ಟು ದೊಡ್ಡವು. ಪ್ರತಿ ಚಿತ್ರಕಲೆಯೂ ಒಂದಕ್ಕೊಂದು ಭಿನ್ನ-ವಿಭಿನ್ನ. 58 ವರ್ಷದ ಈ ಕಲಾವಿದ ಈಸ್ಟ್ ಸುಸ್ಸೆಕ್ಸ್ ಎಂಬ ಸ್ಟುಡಿಯೋ ಹೊಂದಿದ್ದಾನೆ. ಕಾಕತಾಳೀಯ ಎಂಬಂತೆ ಇದು ಈ ಹಿಂದೆ ಹಸು ಹಾಲಿನ ಮಿಲ್ಕಿಂಗ್ ಪಾರ್ಲರ್ ಆಗಿತ್ತು. ಇಲ್ಲೇ ಈತ ಹಸುಗಳ ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬುವ ಕಾಯಕದಲ್ಲಿ ತೊಡಗಿದ್ದಾನೆ.
ಮೈದಾನದಲ್ಲಿರುವ ಹಸುಗಳ ಬಳಿ ತೆರಳಿ ಮೊದಲು ಛಾಯಾಚಿತ್ರಗಳನ್ನು ತೆಗೆಯುವ ಮಾರ್ಷಲ್ ನಂತರ ತನ್ನ ಸ್ಟುಡಿಯೋಗೆ ಹಿಂದಿರುಗಿ ಪೇಂಟಿಂಗ್‍ನಲ್ಲಿ ತೊಡಗುತ್ತಾನೆ. ಮಾನವನಿಗೆ ಬಹು ಉಪಯೋಗಿಯಾದ ಈ ಮುಗ್ಧ ಜೀವಿಯನ್ನು ವಿಭಿನ್ನ ಭಾವನೆಗಳಲ್ಲಿ ಚಿತ್ರರೂಪಕ್ಕೆ ಇಳಿಸುವುದು ಈತನ ಒಂದು ವಿಶಿಷ್ಟ ಹವ್ಯಾಸ. ಕಳೆದ ಹತ್ತು ವರ್ಷಗಳಿಂದ ನೂರಾರು ಗೋವುಗಳ ಚಿತ್ರ ಬಿಡಿಸಿ ಬಣ್ಣ ತುಂಬಿರುವ ಈತನಿಗೆ ಗೋವಿನ ವರ್ಣಚಿತ್ರಗಳು ವಿಶಿಷ್ಟ ಸಂತೃಪ್ತಿ ನೀಡುತ್ತವೆಯಂತೆ. ಎರಡು ಅಡಿ ಉದ್ದದ ಬ್ರಷ್ ಹಿಡಿದು ಕ್ಯಾನ್‍ವಾಸ್ ಮೇಲೆ ಲೀಲಾಜಲವಾಗಿ ಹಸುವಿನ ಚಿತ್ರವನ್ನು ಬಿಡಿಸಿ ನಂತರ ಕಪ್ಪು ತೈಲ ವರ್ಣ ಮತ್ತು ಟರ್‍ಪೈಂಟೈನ್‍ನೊಂದಿಗೆ ಬಣ್ಣ ತುಂಬುತ್ತಾನೆ. ಒಂದು ಚಿತ್ರ ಬಿಡಿಸಿ ಬಣ್ಣದ ಸ್ಪರ್ಶ ನೀಡಲು ಆತ ಹಲವಾರು ವಾರಗಳನ್ನು ತೆಗೆದುಕೊಳ್ಳುತ್ತಾನೆ ಗೋವಿನ ಚಿತ್ರಗಳು ಈತನ ಮನಸ್ಸಿಗೆ ನೆಮ್ಮದಿ, ಹಣ, ಹೆಸರು ಎಲ್ಲವನ್ನೂ ನೀಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin