ಲಿಕ್ಕರ್ ಮಾಫಿಯಾ ಮೇಲೆ ಇಡಿ ದಾಳಿ. ಕೋಟ್ಯಂತರ ರೂ. ಮದ್ಯ ವಶ

ಈ ಸುದ್ದಿಯನ್ನು ಶೇರ್ ಮಾಡಿ

ED-Department

ಅಹಮದಾಬಾದ್, ಮೇ 10- ಗುಜರಾತ್‍ನ ವಿವಿಧ ಸ್ಥಳಗಳ ಮೇಲೆ ಇಂದು ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು 2.5 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಕ್ರಮ ಮದ್ಯಗಳು ಹಾಗೂ ಲಿಕ್ಕರ್ ಕುಳಗಳಿಗೆ ಸೇರಿದ ದುಬಾರಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.   ಡಮನ್‍ನ ಲಿಕ್ಕರ್ ಮಾಫಿಯಾದ ಅಕ್ರಮ ಗೋದಾಮಿನ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಭಾರೀ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದು ಲಿಕ್ಕರ್ ಮಾಫಿಯಾ ಡಾನ್ ರಮೇಶ್ ಪಟೇಲ್‍ಗೆ ಸೇರಿದ್ದು ಎಂದು ಹೇಳಲಾಗಿದೆ.ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ಮದ್ಯ, ಐಎಂಎಫ್‍ಎಲ್ ಲಿಕ್ಕರ್ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಇನ್ನೂ ಕೆಲವು ಭಾಗಗಳಲ್ಲಿ ಲಿಕ್ಕರ್ ಮಾಫಿಯಾಗೆ ಕಡಿವಾಣ ಹಾಕಲು ಕಾರ್ಯಾಚರಣೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin