ಆರ್ಟ್ ಆಫ್ ಲೀವಿಂಗ್‍ಗೆ ಎನ್‍ಜಿಟಿ ಮತ್ತೆ ತಪರಾಕಿ

ಈ ಸುದ್ದಿಯನ್ನು ಶೇರ್ ಮಾಡಿ

Art-of-living
ನವದೆಹಲಿ, ಮೇ 11-ವಿಶ್ವ  ಸಂಸ್ಕೃತಿ   ಉತ್ಸವದ ವೇಳೆ ಯಮುನಾ ನದಿ ಮತ್ತು ದಂಡೆಯನ್ನು ಮಾಲಿನ್ಯಗೊಳಿಸಿರುವ ಆರೋಪದ ಮೇಲೆ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲೀವಿಂಗ್‍ಗೆ (ಎಒಎಲ್) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‍ಜಟಿ) ಇಂದು ಮತ್ತೆ ತರಾಟೆಗೆ ತೆಗೆದುಕೊಂಡಿದೆ.
ಯಮುನಾ ನದಿ ಮಾಲಿನ್ಯ ಕುರಿತು ವಾಸ್ತವ ವರದಿ ನೀಡಿದ್ದ ತಜ್ಞರ ಸಮಿತಿ ವರದಿಗೆ ಕಳಂಕ ತಂದು ಎಒಎಲ್‍ನನ್ನು ಓಲೈಸಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರವನ್ನು (ಡಿಡಿಎ) ಎನ್‍ಜಿಟಿ ತರಾಟೆ ತೆಗೆದುಕೊಂಡಿತು.



ಏಳು ಸದಸ್ಯರ ತಜ್ಜರ ಸಮಿತಿ ನಿರ್ಧಾರವನ್ನು ಪ್ರಶ್ನಿಸಿರುವ ಡಿಡಿಎ ವಕೀಲ ಕ್ರಮಕ್ಕೆ ಎನ್‍ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರ್ಯಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಜ್ಞರ ಸಮಿತಿ ನಿರ್ಣಯಗಳ ವಿರುದ್ಧ ವಿನಾಕಾರಣ ಕಳಂತ ತರುವವರ ವಿರುದ್ಧ ಕ್ರಮ ಕೈಗೊಳ್ಳಲು ನ್ಯಾಯಮಂಡಳಿ ಹಿಂಜರಿಯುವುದಿಲ್ಲೆ ಎಂದು ಅವರು ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin