ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕನಿಗೆ ಚಪ್ಪಲಿ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

Slipper--01

ಚಿತ್ರದುರ್ಗ, ಮೇ 11- ಬರದಿಂದ ಕಂಗೆಟ್ಟ ರೈತನೊಬ್ಬ ಬೆಳೆ ಪರಿಹಾರ ಬರಲಿಲ್ಲವೆಂಬ ಕಾರಣಕ್ಕೆ ಕುಪಿತಗೊಂಡು ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕನಿಗೆ ಚಪ್ಪಲಿ ಸೇವೆ ಮಾಡಿದ ಘಟನೆ ಹೊಳೆಲ್ಕೆರೆ ತಾಲ್ಲೂಕಿನಲ್ಲಿ ನಡೆದಿದೆ.  ತಾಲ್ಲೂಕಿನ ಕಡೂರು ಗ್ರಾಮ ಲೆಕ್ಕಾಧಿಕಾರಿ ಬಿ.ಮುರ್ತಿಗೆ ರೈತ ವೀರಭದ್ರಪ್ಪ ಸಾರ್ವಜನಿಕ ಸ್ಥಳದಲ್ಲೇ ಚಪ್ಪಲಿಯಿಂದ ಹೊಡೆದಿದ್ದಾನೆ.  ಬಿ.ಮೂರ್ತಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಕಚೇರಿಗೆ ತೆರಳುತ್ತಿದ್ದಾಗ ವೀರಭದ್ರಪ್ಪ ಎದುರಾಗಿ ಬೆಳೆ ಪರಿಹಾರ ಇನ್ನೂ ಕೈಗೆ ಬಂದಿಲ್ಲ. ಏನು ಕೆಲಸ ಮಾಡುತ್ತೀರ್ರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಸಬೂಬು ಹೇಳಲು ಮುಂದಾದಾಗ ನಿಮ್ಮಗಳ ಅಸಡ್ಡೆ ಹಾಗೂ ನಿರ್ಲಕ್ಷ್ಯದಿಂದ ಬೆಳೆ ಪರಿಹಾರ ಬಂದಿಲ್ಲ ಎಂದು ಕೆಟ್ಟ ಶಬ್ಧಗಳಿಂದ ನಿಂದಿಸಿ ಕೋಪ ತಡೆಯಲಾರದೆ ಕೊನೆಗೆ ಚಪ್ಪಲಿಯಿಂದ ವೀರಭದ್ರಪ್ಪ ಗ್ರಾಮ ಲೆಕ್ಕಾಧಿಕಾರಿ ಮೂರ್ತಿಗೆ ಹೊಡೆದಿದ್ದಾರೆ.



ಈ ವೇಳೆ ಆತನ ಸಹಾಯಕ ಶಂಭುಲಿಂಗಪ್ಪ ಜಗಳ ಬಿಡಿಸಲು ಮುಂದಾದಾಗ ಆತನಿಗೂ ರೈತ ಚಪ್ಪಲಿ ಸೇವೆ ಮಾಡಿದ್ದಾನೆ. ಈ ಸಂಬಂಧ ಚಿಕ್ಕಜಾಜೂರು ಠಾಣೆಯಲ್ಲಿ ದೂರು ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin