ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ನಾಗ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು,ಮೇ.11- ಬ್ಲ್ಯಾಕ್ ಆಂಡ್ ವೈಟ್ ದಂಧೆಯ ಪ್ರಕರಣದಲ್ಲಿ ತಲೆಮೆರಸಿಕೊಂಡಿದ್ದ ಪಾಲಿಕೆಯ ಮಾಜಿ ಸದಸ್ಯ ವಿ. ನಾಗರಾಜ್ ಹಾಗೂ ಆತನ ಇಬ್ಬರು ಪುತ್ರರನ್ನು ಬೆಂಗಳೂರು ಪೊಲೀಸರ ವಿಶೇಷ ತಂಡ ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಏಪ್ರಿಲ್ 14 ರಂದು ಶ್ರೀರಾಂಪುರದ ನಾಗರಾಜು ಮನೆಯ ಮೇಲೆ ಎಸಿಬಿ ತಂಡ ದಾಳಿ ಮಾಡಿ ರದ್ದಾದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿತ್ತು. ಅಂದಿನಿಂದ ನಾಗರಾಜು ತಲೆಮರಿಸಿಕೊಂಡಿದ್ದ , ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಗರಾಜು ಬೇಟೆಗಾಗಿ 27 ದಿನಗಳಿಂದ ಹುಡುಕಾಟ ನಡೆಸಿತು.



ಇಂದು ತಮಿಳುನಾಡಿನ ವೆಲ್ಲೂರಿನ ಅರ್ಕಾಟ್‍ನ ತೋಟದ ಮನೆಯಲ್ಲಿ ತಂಗಿದ್ದವರ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ತಂಡ ದಾಳಿ ಮಾಡಿ ನಾಗರಾಜು ಸೇರಿದಂತೆ ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಅವರನ್ನು ಬಂಧಿಸಿದ್ದಾರೆ. ಎಸಿಪಿ ರವಿಕುಮಾರ್ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೊನೆಗೂ ನಾಗರಾಜು ಮತ್ತು ಮಕ್ಕಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 



 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin