ತುಮಕೂರು ಪಾಲಿಕೆ ಮುಂಬಾಗದಲ್ಲಿ ಗಾಳಿಯಲ್ಲಿ ಹಾರಾಡಿದ ಸಾವಿರಾರು ಮತದಾರರ ಅರ್ಜಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Papers--01

ತುಮಕೂರು, ಮೇ 11– ಜಿಲ್ಲೆಯಲ್ಲಿ ಬೋಗಸ್ ಮತದಾರರ ಪಟ್ಟಿ ಸೇರ್ಪಡೆ ಬೆನ್ನಲ್ಲೇ ಈಗ ಮತ್ತೊಂದು ಶಾಕ್ ಎದುರಾಗಿದ್ದು, ಸಾವಿರಾರು ಮತದಾರರ ಅರ್ಜಿಗಳು ರಸ್ತೆ ತುಂಬೆಲ್ಲಾ ರಾರಾಜಿಸುತ್ತಿದ್ದ ದೃಶ್ಯ ಕಂಡು ಬಂದಿದೆ.  ಮಹಾನಗರ ಪಾಲಿಕೆ ಮುಂಬಾಗ ಸಾವಿರಾರು ಮತದಾರರ ಅರ್ಜಿಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಇದನ್ನು ಕಂಡ ಸಾರ್ವಜನಿಕರು ಹಾಗೂ ಪ್ರಜ್ಞಾವಂತರು ದಿಗ್ಭ್ರಮೆಗೊಳಗಾದರು. ಈಗಾಗಲೇ ಜಿಲ್ಲೆಯಲ್ಲಿ 15ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಸೇರ್ಪಡೆಯಾಗಿದ್ದು, ಕಳೆದ 4 ವರ್ಷಗಳಿಂದ 36,600ಕ್ಕೂ ಹೆಚ್ಚು ನಕಲಿ ಮತದಾರರು ಸೇರ್ಪಡೆಯಾಗಿದ್ದಾರೆ.ಹೊರ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಹೆಸರುಗಳೆಲ್ಲವೂ ಸೇರ್ಪಡೆಯಾಗಿದೆ. ಇದರ ಬಗ್ಗೆ ಹಲವರು ದನಿ ಎತ್ತಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಬಿಎಲ್‍ಒಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಲಾಗಿದೆ.  ಜಿಲ್ಲೆಯ ಗುಬ್ಬಿ ತಾಲ್ಲೂಕು ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚು ನಕಲಿ ಮತದಾರರ ಪಟ್ಟಿ ಸೇರ್ಪಡೆಯಾಗಿರುವುದು ಕಂಡು ಬಂದಿದೆ. ಈ ಸಂಬಂಧ ಮಾಹಿತಿ ಹಕ್ಕುದಾರರೊಬ್ಬರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಡಿಸಿ ಅವರು ಎಡಿಸಿ ಅವರಿಗೆ ವರ್ಗಾಯಿಸಿದ್ದು, ಇದರ ತನಿಖೆ ವಿಳಂಬವಾಗುತ್ತಿದೆ.  ನಗರದ ಪುರಸ್‍ಕಾಲೋನಿ ಹಾಗೂ ಪಾಲಿಕೆ ಮುಂಭಾಗ ಮತದಾರರ ಅರ್ಜಿಗಳು ರಸ್ತೆಯಲ್ಲಿ ಬಿದ್ದಿವೆ. ನಾವು ಕಾನೂನು ರೀತಿಯಲ್ಲಿ ಪಟ್ಟಿಗೆ ಹೆಸರು ಸೇರಿಸಲು ಹೋದರೆ ಮತದಾರರ ಚೀಟಿ ನಮ್ಮ ಕೈ ಸೇರುವುದು ವರ್ಷಗಳೇ ಕಳೆಯುತ್ತವೆ.   ಒಂದು ವೇಳೆ ಬಂದರೂ ಅದರಲ್ಲಿ ಹಲವಾರು ದೋಷಗಳಿರುತ್ತವೆ. ಆದರೆ, ಜಿಲ್ಲೆಗೆ ಸಂಬಂಧಪಡದವರ ವ್ಯಕ್ತಿಗಳಿಗೆ ಸುಲಭವಾಗಿ ಮತದಾರರ ಚೀಟಿ ದೊರೆಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin