ಪಾಕ್ ಸೈನಿಕರು ನಡೆಸಿದ ಮೋರ್ಟಾರ್ ದಾಳಿಯಲ್ಲಿ ಮಹಿಳೆ ಸಾವು, ಕೆಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Casefire--01

ಜಮ್ಮು, ಮೇ 11-ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಪಾಕಿಸ್ತಾನಿ ಸೈನಿಕರ ಅಪ್ರಚೋದಿತ ಹಿಂಸಾತ್ಮಕ ದಾಳಿ ಮುಂದುವರಿದಿದೆ. ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕ್ ಸೇನಾಪಡೆಗಳು ಇಂದು ನಡೆಸಿದ ಮೋರ್ಟಾರ್ ಷೆಲ್ ದಾಳಿಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟು, ಆಕೆಯ ಪತಿ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ.   ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದ ನೌಶೇರಾ ಸೆಕ್ಟರ್‍ನ ಲಾಮ್ ಪಟ್ಟಿಯಲ್ಲಿನ ಗ್ರಾಮವೊಂದರ ಮೇಲೆ ಪಾಕ್ ರೇಂಜರ್‍ಗಳು ಷೆಲ್ ದಾಳಿ ನಡೆಸಿದರು. ಈ ಕೃತ್ಯದಲ್ಲಿ ಅಖ್ತರ್ ಬೀ (35) ಮೃತ¥ಟ್ಟರು. ಆಕೆಯ ಪತಿ ಮಹಮದ್ ಹನೀಫ್ (40) ತೀವ್ರ ಗಾಯಗೊಂಡಿದ್ದಾರೆ.



ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಇರುವ ಭಾರತೀಯ ಸೇನಾ ನೆಲೆಗೆಳ ಮೇಲೆ ನಿನ್ನೆ ರಾತ್ರಿ 10.40ರಿಂದ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸ್ವಯಂಚಾಲಿತ ಬಂಧೂಕುಗಳಿಂದ ಪಾಕ್ ಯೋಧರು ಅಪ್ರಚೋದಿತ ದಾಳಿ ನಡೆಸಿದ್ದಾರೆ. ಸೇನಾ ಮುಂಚೂಣಿ ನೆಲೆಗಳು ಮತ್ತು ನಾಗರಿಕರ ಪ್ರದೇಶಗಳ ಮೇಲೂ 82 ಎಂಎಂ ಮತ್ತು 120 ಎಂಎಂ ಮೋರ್ಟಾರ್‍ನಿಂದ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin