ಯುವಕನನ್ನು ತುಂಡು ತುಂಡಾಗಿ ಕತ್ತರಿಸಿ, ಪೊಲೀಸ್ ಠಾಣೆ ಎದುರೇ ರುಂಡ ಎಸೆದು ಹಂತಕರು ಪರಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

Murder-t--01

ಪುದುಚೇರಿ, ಮೇ 11-ತಮಿಳುನಾಡಿನ ಕಡಲೂರಿನಲ್ಲಿ ನಿನ್ನೆ ರಾತ್ರಿ ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಯುವಕನೊಬ್ಬನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಹಂತಕರು ನಂತರ ಕಡಲೂರು ಪೊಲೀಸ್ ಠಾಣೆಗೆ ರುಂಡವನ್ನು ಎಸೆದು ಬೈಕ್‍ಗಳಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯಗಳ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.   ಪುದುಚೇರಿಯಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆಯೊಂದರಲ್ಲಿ ಶಾಮೀಲಾಗಿದ್ದ 18 ವರ್ಷ ಯುವಕನನ್ನು ಹಂತಕರ ಗುಂಪೊಂದು ತುಂಡು ತುಂಡಾಗಿ ಕತ್ತರಿಸಿತು. ನಂತರ ಎರಡು ಬೈಕ್‍ಗಳಲ್ಲಿ ಕಡಲೂರು ಪೊಲೀಸ್ ಠಾಣೆಯ ಪ್ರವೇಶ ದ್ವಾರದ ಬಳಿ ತೆರಳಿದ ದುಷ್ಕರ್ಮಿಗಳು ರುಂಡವನ್ನು ಠಾಣೆಯೊಳಗೆ ಎಸೆದು ಪರಾರಿಯಾದರು.



ಪೊಲೀಸ್ ಠಾಣೆಗೆ ಮೂರು ಕಿ.ಮೀ.ದೂರದಲ್ಲಿರುವ ಕರೆಯೊಂದರ ಬಳಿ ಯುವಕನ ರುಂಡವಿಲ್ಲದ ದೇಹ ಆನಂತರ ಪೊಲೀಸರಿಗೆ ಪತ್ತೆಯಾಯಿತು. ಪುದುಚೇರಿ ಪೊಲೀಸರ ನೆರವಿನೊಂದಿಗೆ ಈ ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಡಲೂರು ಠಾಣೆ ಇನ್ಸ್‍ಪೆಕ್ಟರ್ ವಿಜಯಕುಮಾರ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  



Facebook Comments

Sri Raghav

Admin