ಅಮೆರಿಕದಲ್ಲಿ ಕೋಟ್ಯಂತರ ಡಾಲರ್ ಕಾಲ್ ಸೆಂಟರ್ ಹಗರಣ : ಭಾರತೀಯ ಯುವಕ ತಪ್ಪಿತಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Call-Center-Scam

ವಾಷಿಂಗ್ಟನ್, ಮೇ 12-ಅಮೆರಿಕದಲ್ಲಿ ನಡೆದ ಬಹು ದಶಲಕ್ಷ ಡಾಲರ್ ಕಾಲ್ ಸೆಂಟರ್ ಹಗರಣದಲ್ಲಿ ತಾನು ಶಾಮೀಲಾಗಿರುವುದಾಗಿ 28 ವರ್ಷದ ಭಾರತೀಯ ಪ್ರಜೆ ಒಪ್ಪಿಕೊಂಡಿದ್ದಾನೆ. ಭಾರತದಲ್ಲಿರುವ ಕಾಲ್ ಸೆಂಟರ್‍ಗಳನ್ನು ಬಳಸಿಕೊಂಡು ಅಮೆರಿಕನ್ನರನ್ನು ವಂಚಿಸಿದ್ದಲ್ಲದೆ, ವಲಸೆ ಅಧಿಕಾರಿಗಳನ್ನೂ ತಪ್ಪುದಾರಿಗೆ ಎಳೆದ ಆರೋಪವನ್ನು ಈತ ಎದುರಿಸುತ್ತಿದ್ದಾನೆ.   ನೂರಾರು ಅಮೆರಿಕನ್ನರನ್ನು ಗುರಿಯಾಗಿಟ್ಟುಕೊಂಡು ತೆರಿಗೆ ಬಾಕಿ ನೆಪದಲ್ಲಿ ಕಾಲ್‍ಸೆಂಟರ್‍ಗಳಿಂದ ಕರೆ ಮಾಡಿ ಲಕ್ಷಾಂತರ ಡಾಲರ್‍ಗಳನ್ನು ಕಾನೂನುಬಾಹಿರವಾಗಿ ವಸೂಲಿ ಮಾಡಿದ್ದ ಆರೋಪದ ಮೇಲೆ ನ್ಯೂಜೆರ್ಸಿ ನಿವಾಸಿ ಹರ್ಷ್ ಪಟೇಲ್‍ನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.



ಈ ದೊಡ್ಡ ಹಗರಣದಲ್ಲಿ ಶಾಮೀಲಾದ ತಪ್ಪನ್ನು ಒಪ್ಪಿಕೊಂಡಿರುವ ಭಾರತೀಯರಲ್ಲಿ ಈತ ಮೂರನೆಯವನು. ಈವರೆಗೂ ಹರ್ಷ್ ಪಟೇಲ್, 50 ಮಂದಿ ಇತರ ವ್ಯಕ್ತಿಗಳು ಹಾಗೂ ಭಾರತೀಯ ಮೂಲದ ಐದು ಕಾಲ್ ಸೆಂಟರ್‍ಗಳ ವಿರುದ್ದ ವಂಚನೆ, ಹಣ ದುರ್ಬಳಕೆ, ವಲಸೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿಕೆ ಮೊದಲಾದ ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin