ತ್ರಿವಳಿ ತಲಾಕ್ ಹೀನಾಯ ಮತ್ತು ಅನಿಷ್ಟ ಪದ್ಧತಿ : ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Talaq-Talaq-Talaq

ನವದೆಹಲಿ, ಮೇ 12-ತ್ರಿವಳಿ ತಲಾಕ್ ಮುಸ್ಲಿಮರಲ್ಲಿ ವಿವಾಹ ಅಂತ್ಯಗೊಳ್ಳುವ ಅತ್ಯಂತ ಹೀನಾಯ ಮತ್ತು ಅನಪೇಕ್ಷಿತ ಸ್ವರೂಪವಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ತೀವ್ರ ವಿಷಾದ ವ್ಯಕ್ತಪಡಿಸಿದೆ.   ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ತ್ರಿವಳಿ ತಲಾಕ್ ಸಿಂಧುತ್ವ ಕುರಿತು ಸುಪ್ರೀಂಕೋರ್ಟ್ ಇಂದು ಸಹ ವಿಚಾರಣೆ ಮುಂದುವರಿಸಿತು.   ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್ ಇಸ್ಲಾಂ ಧರ್ಮದ ಮೂಲಭೂತ ತತ್ತ್ವವೇ ಎಂಬ ಬಗ್ಗೆ ತಾನು ಕೂಲಂಕಷ ಪರಿಶೀಲನೆ ನಡೆಸುವುದಾಗಿ ನಿನ್ನೆ ತಿಳಿಸಿದ್ದ ಸರ್ವೋಚ್ಚ ನ್ಯಾಯಾಲಯ ಇಸ್ಲಾಮ್ ಧರ್ಮದ ಕೆಲವು ಸಂಸ್ಥೆಗಳು ತ್ರಿವಳಿ ತಲಾಕ್ ನ್ಯಾಯಸಮ್ಮತ ಎಂದು ಹೇಳುತ್ತಿವೆ. ಇದು ವಿಷಾದನೀಯ ಎಂದು ಹೇಳಿದೆ.



ತ್ರಿವಳಿ ತಲಾಕ್ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.  ತ್ರಿವಳಿ ತಲಾಕ್ ಒಂದು ಅನಿಷ್ಟ ಪದ್ದತಿ, ಇದು ವಿವಾಹ ವಿಚ್ಛೇದನ ವಿಷಯದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ನೀಡುವಲ್ಲಿ ವಿಫಲವಾಗಿದೆ ಎಂದು ಹಿರಿಯ ವಕೀಲ ರಾಮ್ ಜೇಠ್ಮಾಲನಿ ವಾದ ಮಂಡಿಸಿದರು.

ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಉದಯ್ ಲಲಿತ್ ಮತ್ತು ಅಬ್ದುಲ್ ನಜೀರ್ ಅವರನ್ನೂ ಒಳಗೊಂಡ ಪೀಠ ಈ ಅರ್ಜಿಗಳ ಕುರಿತು ಆರು ದಿನಗಳ ಕಾಲ ವಿಚಾರಣೆ ಮುಂದುವರಿಸಲಿದೆ.   ಏಳು ಅರ್ಜಿಗಳ ವಿಚಾರಣೆ ನಡೆಸಲು ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಮತ್ತು ಪಾರ್ಸಿ-ಈ ಸಮುದಾಯಗಳ ನ್ಯಾಯಾಧೀಶರನ್ನು ಈ ನ್ಯಾಯಪೀಠ ಒಳಗೊಂಡಿದೆ. ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಆರೋಪಿಸಿ ಮುಸ್ಲಿಂ ಮಹಿಳೆಯರು ಸಲ್ಲಿಸಿರುವ ಐದು ಅರ್ಜಿಗಳ ಬಗ್ಗೆಯೂ ವಿಚಾರಣೆ ಮುಂದುವರಿಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin