ಪಿಯುಸಿಯಲ್ಲಿ 584 ಅಂಕ ಗಳಿಸಿ ಸಾಧನೆ ಮಾಡಿದ ಅಡುಗೆ ಭಟ್ಟನ ಮಗಳು

ಈ ಸುದ್ದಿಯನ್ನು ಶೇರ್ ಮಾಡಿ

Kusuma--01

ಬೆಂಗಳೂರು, ಮೇ 12-ಹೋಟೆಲ್‍ನಲ್ಲಿ ಅಡುಗೆ ಮಾಡುವ ವ್ಯಕ್ತಿಯ ಪುತ್ರಿ ಕುಸುಮ ದ್ವಿತೀಯ ಪಿಯುಸಿಯಲ್ಲಿ 584 ಅಂಕ ಪಡೆಯುವ ಮೂಲಕ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಶಕ್ತಿಗಣಪತಿ ನಗರದ ನಿವಾಸಿ ಬಾಬು ಬಸವೇಶ್ವರ ನಗರದ ಖಾಸಾಗಿ ಹೋಟೆಲ್ ಒಂದರಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದಾರೆ.  ಇವರ ಪುತ್ರಿ ಕುಸುಮ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.97 ಅಂಕ ಪಡೆದು ಉತ್ತೀರ್ಣರಾಗಿದ್ದರು. ನಂತರ ಎಂಇಎಸ್ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ವ್ಯಾಸಂಗ ಮಾಡುತ್ತಿದ್ದಾರೆ.ನಿನ್ನೆ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಕುಸುಮ 600 ಅಂಕಗಳಿಗೆ 584 ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಗಣಿತ ಮತ್ತು ಬಯೋಲಾಜಿಯಲ್ಲಿ 100 ಕ್ಕೆ 100 ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin