ಬಂಧನದ ನಂತರ ಪ್ರಕರಣದಿಂದ ಹಿಂದೆ ಸರಿದ ನಾಗನ ಪರ ವಕೀಲ

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga-01

ಬೆಂಗಳೂರು, ಮೇ 12– ಕಳೆದ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡು ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದ ಪಾಲಿಕೆ ಮಾಜಿ ಸದಸ್ಯ ರೌಡಿ ಶೀಟರ್ ವಿ.ನಾಗರಾಜನ ಪರ ವಕೀಲ ನಾಗನ ಬಂಧನ ನಂತರ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ತಾವು ನೀಡಿದ್ದ ಸಲಹೆಗಳನ್ನು ನಾಗರಾಜ ಸ್ವೀಕರಿಸದ ಹಿನ್ನೆಲೆಯಲ್ಲಿ ಬೇಸರಗೊಂಡು ನಾಗನ ಪ್ರಕರಣದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ವಕೀಲ ಶ್ರೀರಾಮರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.



 

ನಿನ್ನೆ ಪೊಲೀಸರು ಬೆನ್ನಟ್ಟಿದ್ದಾಗಲೂ ನಾಗ ನನಗೆ ಕರೆ ಮಾಡಿದ್ದ, ನನ್ನ ಸಲಹೆಗಳು ಅವರಿಗೆ ಇಷ್ಟ ಆಗಿಲ್ಲ. ಹಾಗಾಗಿ ನಾನು ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕಳೆದ 20 ವರ್ಷಗಳಿಂದ ನಾಗನ ಪರ ವಕಾಲತ್ತು ವಹಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin