ಮೈಸೂರು ಅರಮನೆಯ ಗೇಟ್ ಬಳಿ ಇರುವ ಎಸ್‍ಬಿಐ ಎಟಿಎಂನಲ್ಲಿ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Fire

ಮೈಸೂರು, ಮೇ 12– ಇಲ್ಲಿನ ಮೈಸೂರು ಅರಮನೆಯ ಗೇಟ್ ಬಳಿ ಇರುವ ಎಸ್‍ಬಿಐ ಬ್ಯಾಂಕ್‍ಗೆ ಸೇರಿದ ಎಟಿಎಂನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಪಕ್ಕದ ಟಿಕೆಟ್ ಕೌಂಟರ್‍ಗೂ ತಗುಲಿ ಕೆಲ ಉಪಕರಣಗಳು, ನಗದು ಸುಟ್ಟುಹೋಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗೆ 6 ಗಂಟೆ ಸಮಯದಲ್ಲಿ ಅರಮನೆ ಪ್ರವೇಶಿಸಲು ನೀಡುವ ಟಿಕೆಟ್ ಕೌಂಟರ್‍ನಲ್ಲಿ ಹೊಗೆಯಾಡುತ್ತಿರುವುದನ್ನು ನೋಡಿ ವಾಯು ವಿಹಾರ ಮಾಡುತ್ತಿದ್ದವರೊಬ್ಬರು ಆತಂಕಗೊಂಡು ಪೊಲೀಸ್ ನಿಯಂತ್ರಣ ಕೋಣೆಗೆ ಮಾಹಿತಿ ನೀಡಿದ್ದಾರೆ.



ತಕ್ಷಣ ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದಾರೆ. ಎಟಿಎಂ ಕೇಂದ್ರದಲ್ಲಿ ನಗದು ಪಡೆಯುವ ಯಂತ್ರಕ್ಕೆ ಅಳವಡಿಸಿದ್ದ ಬ್ಯಾಟರಿಯಲ್ಲಿ ಕಿಡಿ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೆಂಕಿಯಿಂದ ಎಟಿಎಂ ಯಂತ್ರ ಸಂಪೂರ್ಣ ಸುಟ್ಟುಹೋಗಿದ್ದು, ಅದರಲ್ಲಿ ಎಷ್ಟು ಹಣವಿತ್ತು ಮತ್ತು ಎಷ್ಟು ಸುಟ್ಟುಹೋಗಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅರಮನೆ ಟಿಕೆಟ್ ಕೌಂಟರ್‍ನಲ್ಲಿದ್ದಂತಹ ಯಂತ್ರಗಳು, ಕೆಲ ಕಾಗದ ಪತ್ರಗಳು ಕೂಡ ಬೆಂಕಿಯಲ್ಲಿ ಸುಟ್ಟುಹೋಗಿವೆ. ದೇವರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin