ಇಂಡೋನೆಷ್ಯಾದ ಹುಲುಂಗ್ ಕರಾವಳಿ ತೀರದಲ್ಲಿ ನಿಗೂಢ ಸಾಗರ ಜೀವಿ ಪತ್ತೆ..!
ಜಕಾರ್ತ, ಮೇ 13-ದ್ವೀಪರಾಷ್ಟ್ರ ಇಂಡೋನೆಷ್ಯಾದ ಹುಲುಂಗ್ ಕರಾವಳಿ ತೀರದಲ್ಲಿ ಬೃಹತ್ ನಿಗೂಢ ಸಾಗರ ಜೀವಿಯೊಂದರ ಮೃತದೇಹ ತೇಲಿ ಬಂದಿದೆ. ಈ ಜೀವಿ ಗೋಚರಿಸಿದ ನಂತರ ಸಮುದ್ರದ ಒಂದು ಭಾಗವು ಕೆಂಪು ಬಣ್ಣಕ್ಕೆ ತಿರುಗಿದ್ದು ಕುತೂಹಲ ಕೆರಳಿಸಿದೆ. ಹುಲುಂಗ್ ಗ್ರಾಮದ ನಿವಾಸಿ ಅರ್ಸುಲ್ ಟೌನಕೋಟಾ ಎಂಬ ವ್ಯಕ್ತಿಗೆ ಮುಂಜಾನೆಯೇ ದೊಡ್ಡ ನಿಗೂಢ ಜಲಚರ ಮೃತದೇಹ ಪತ್ತೆಯಾಯಿತು. ಸುದ್ದಿ ತಿಳಿದ ಕೂಡಲೇ ಅನೇಕರು ಸ್ಥಳಕ್ಕೆ ಆಗಮಿಸಿದರು. ಸಾಗರ ವಿಜ್ಞಾನಿಗಳೂ ಕೂಡ ಈ ಜೀವಿಯನ್ನು ಪರಿಶೀಲಿಸಿದರು.
ಇದು ಬೃಹತ್ ಸ್ಕ್ವಿಡ್ (ಒಂದು ಬಗೆಯ ಮೀನು) ಅಥವಾ ಅಪರೂಪದ ತಿಮಿಂಗಲ ಇರಬಹುದು ಎಂದು ಲೀ ಕಾಂಗ್ ಚಿಯಾನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಅಧಿಕಾರಿ ಮಾರ್ಕಸ್ ಚೌವ ಹೇಳಿದ್ದಾರೆ. ಸಾಗರ ವಿಜ್ಞಾನಿಗಳ ಪ್ರಕಾರ ಇದು ಬಾಲೀನ್ ವೇಲ್ ಜಾತಿಗೆ ಸೇರಿದ ತಿಮಿಂಗಲ. ಸುಮಾರು 15 ಮೀಟರ್ಗಳಷ್ಟು ಉದ್ದವಿರುವ ಈ ಸಮುದ್ರ ಪ್ರಾಣಿ 35 ಟನ್ ತೂಕವಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS