ಚೀನಾ ಶೃಂಗಸಭೆಗೆ ಭಾರತ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಬೀಜಿಂಗ್, ಮೇ 13- ಚೀನಾ ರಾಜಧಾನಿ ಬೀಜಿಂಗ್‍ನಲ್ಲಿ ನಾಳೆಯಿಂದ ಆರಂಭವಾಗಲಿರುವ ಒಂದು ಪಟ್ಟಿ ಒಂದು ರಸ್ತೆ (ಒಬಿಒಆರ್) ಶೃಂಗಸಭೆಗೆ ಭಾರತ ಗೈರು ಹಾಜರಾಗಲಿದೆ. ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿರ್ಮಾಣ ಯೋಜನೆಗೆ ವಿರೋಧ ವ್ಯಕ್ತಪಡಿಸಲು ಭಾರತ ಈ ಪರೋಕ್ಷ ಮಾರ್ಗವನ್ನು ಅನುಸರಿಸಿದೆ.   ಭಾರತವು ಬೆಲ್ಡ್ ಅಂಡ್ ರೋಡ್ ಪೋರಂ (ಬಿಆರ್‍ಎಫ್) ಸಮಾವೇಶವನ್ನು ಪ್ರತಿನಿಧಿಸಲಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ತಿಳಿಸಿದ್ದರು. ಆದರೆ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಭಾರತ ಗೈರು ಹಾಜರಾಗಲಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಭಾರತ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin