ಅಂತಾರಾಷ್ಟ್ರೀಯ ಕೋರ್ಟ್‍ನಲ್ಲಿ ನಾಳೆ ಜಾಧವ್ ಪ್ರಕರಣದ ವಿಚಾರಣೆ, ತೀರ್ಪಿನತ್ತ ಎಲ್ಲರ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

Kulabhushan-Jadav-0001

ನವದೆಹಲಿ, ಮೇ 14- ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆಗೆ ತಡೆ ನೀಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನಾಳೆ ನಡೆಸಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಭಾರೀ ಕಾನೂನು ಸಂಘರ್ಷಕ್ಕೆ ವೇದಿಕೆ ಸಿದ್ದವಾಗಿದ್ದು, ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.   ನೆದರ್‍ಲೆಂಡ್ಸ್‍ನ ಹೇಗ್‍ನಲ್ಲಿ ನಾಳೆ ನಡೆಯಲಿರುವ ವಿಚಾರಣೆ ವೇಳೆ ವಾದ-ಪ್ರತಿವಾದಗಳನ್ನು ಸಮರ್ಥವಾಗಿ ಮಂಡಿಸಲು ಉಭಯ ದೇಶಗಳ ಕಾನೂನು ಪರಿಣಿತರು ಸಜ್ಜಾಗಿದ್ದಾರೆ. ಭಾರತವನ್ನು ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರತಿನಿಧಿಸಲಿದ್ದಾರೆ.



ಜಾಧವ್ ಅವರಿಗೆ ತನ್ನ ಮಿಲಿಟರಿ ನ್ಯಾಯಾಲಯವೊಂದು ನೀಡಿರುವ ಗಲ್ಲು ಶಿಕ್ಷೆ ತೀರ್ಪನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಬಲವಾಗಿ ಸಮರ್ಥಿಸಿಕೊಳ್ಳಲು ಪಾಕಿಸ್ತಾನ ಈಗಾಗಲೇ ಕಾರ್ಯತಂತ ರೂಪಿಸಿದೆ.   ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆಗೆ ತಡೆ ನೀಡಿರುವ ಹೇಗ್ ಮೂಲದ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತನ್ನ ತೀರ್ಪನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಅಂಶಗಳ ಬಗ್ಗೆ ಸಾಕಷ್ಟು ಪೂರ್ವತಯಾರಿ ನಡೆಸಿರುವ ಮಾಹಿತಿ ಬಹಿರಂಗಗೊಂಡಿದೆ.

ಇದೇ ವೇಳೆ, ಜಾಧವ್‍ಗೆ ಇಂಟರ್‍ನ್ಯಾಷನಲ್ ಕೋರ್ಟ್‍ನಲ್ಲಿ ತಡೆಯಾಜ್ಞೆ ಲಭಿಸಿರುವುದರಿಂದ ತನ್ನ ವಾದ ಮಂಡಿಸಲು ಭಾರತಕ್ಕೆ ಬಲವಾದ ಕಾನೂನು ಹಿಡಿತ ಲಭಿಸಿದಂತಾಗಿದೆ.   ಬೇಹುಗಾರಿಕೆ ಆರೋಪದ ಮೇಲೆ ಜಾಧವ್ ಅವರನ್ನು ಏಕಪಕ್ಷೀಯವಾಗಿ ವಿಚಾರಣೆ ನಡೆಸಿದ ಪಾಕ್ ಮಿಲಿಟರಿ ಕೋರ್ಟ್ ಅವರಿಗೆ ಮರಣದಂಡನೆ ವಿಧಿಸಿತ್ತು. ಜಾಧವ್ ಅವರನ್ನು ಕಳೆದ ವರ್ಷ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಏಜೆಂಟ್‍ಗಳು ಇರಾನಿನಿಂದ ಅಪಹರಿಸಿ, ಪಾಕ್‍ಗೆ ಕರೆದೊಯ್ದಿದ್ದರು. ನಂತರ ಅವರ ಮೇಲೆ ಗೂಢಚಾರಿಕೆ ಆರೋಪ ಹೊರಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin