ಆರತಕ್ಷತೆ ಸಮಾರಂಭದಲ್ಲಿ ಊಟ ಮಾಡಿ ಹಲವರು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Food-Poison

ತುಮಕೂರು,ಮೇ 14- ಆರತಕ್ಷತೆ ಸಮಾರಂಭದಲ್ಲಿ ಊಟ ಮಾಡಿದ ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.   ಗ್ರಾಮದ ವೀಣಾ ಮತ್ತು ರಮೆZೀಶ್ ಎಂಬುವರ ಮದುವೆ ಶುಕ್ರವಾರ ಬೆಳಗ್ಗೆ ನಡೆದಿತ್ತು. ನಿನ್ನೆ ವಧುವಿನ ಮನೆಯಲ್ಲಿ ಅರತಕ್ಷತೆಯನ್ನು ಏರ್ಪಡಿಸಲಾಗಿತ್ತು.



ಊಟ ಮಾಡಿದ ನಂತರ ರಾತ್ರಿ ವಧು-ವರ ಸೇರಿದಂತೆ 100ಕ್ಕೂ ಹೆಚ್ಚು ಮಂದಿಗೆ ವಾಂತಿ-ಬೇಧಿ, ಸುಸ್ತು ಕಾಣಿಸಿಕೊಂಡಿದೆ. ತಕ್ಷಣ ಅವರನ್ನೆಲ್ಲ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಊಟದಲ್ಲಿ ವಿಷ ಪದಾರ್ಥ ಬೆರೆತಿರಬಹುದೆಂದು ಶಂಕಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು , ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin