ಇಂದಿರಾ ನೆನೆಪು ಚಿರಸ್ಥಾಯಿ : ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Pranab-Mukharjee

ನವದೆಹಲಿ, ಮೇ 14-ಇಂದಿರಾಗಾಂಧಿ ಅವರು ಸಾವಿಗೀಡಾಗಿ 33 ವರ್ಷಗಳು ಕಳೆದರೂ ಪ್ರಜಾಪ್ರಭುತ್ವ ದೇಶದ ಬಹು ಸ್ವೀಕಾರಾರ್ಹ ಮತ್ತು ಸಮರ್ಥ ಆಡಳಿತಗಾರರಾಗಿ ನೆನೆಪಿನಲ್ಲಿ ಉಳಿದಿದ್ದಾರೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ. ರಾಜಧಾನಿಯಲ್ಲಿ ಇಂದು ಇಂಡಿಯಾಸ್ ಇಂದಿರಾ ಎಂಬ ಜೀವನ ಮತ್ತು ಸಾಧನೆ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದಿವಂಗತ ಪ್ರಧಾನಿ ಶ್ರದ್ಧಾಂಜಲಿ ಸಮರ್ಪಸಿ ಅವರು ಮಾತನಾಡಿದರು.  ಇಪ್ಪತ್ತನೇ ಶತಮಾನದಲ್ಲಿ ಅವರು ವಿಶ್ವಾದ್ಯಂತ ಅತ್ಯಂತ ಪ್ರಭಾವಿಯಾಗಿದ್ದರು ಎಂದು ರಾಷ್ಟ್ರಪತಿ ಬಣ್ಣಿಸಿದರು.



ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸ್ಮರಣ ಸಂಚಿಕೆ ಪುಸ್ತಕದ ಸಂಪಾದಕರೂ ಆದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಸಮಾರಂಭದಲ್ಲಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin