ಚಿಕ್ಕಬಳ್ಳಾಪುರದಲ್ಲಿ ಎಕ್ಸಿಸ್ ಬ್ಯಾಂಕ್ ಎಟಿಎಂ ಕಳವಿಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Bank-Rob

ಚಿಕ್ಕಬಳ್ಳಾಪುರ, ಮೇ 14- ನಗರದ ಎಕ್ಸಿಸ್ ಬ್ಯಾಂಕ್‍ನ ಎಟಿಎಂನಲ್ಲಿ ನಿನ್ನೆ ರಾತ್ರಿ ಕಳವು ಯತ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತ್ತಿರುವ ನಗರದ ಹೃದಯ ಭಾಗದ ಶಿಡ್ಲಘಟ್ಟ ರಸ್ತೆಯ ಜಿಲ್ಲಾಡಳಿತ ಭವನಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಎಕ್ಸಿಸ್ ಬ್ಯಾಂಕ್‍ನ ಎಟಿಎಂನಲ್ಲಿ ಈ ಕಳವು ನಡೆದಿದೆ.  ಅರ್ಧ ಮುಚ್ಚಿದ್ದ ಶೇಲ್ಟರ್‍ನ ಬಾಗಿಲನ್ನು ಮೇಲಕ್ಕೆತ್ತಿ ಒಳನುಸುಳಿರುವ ಕಳ್ಳರು ಎಟಿಎಂ ಮುಂಭಾಗವನ್ನು ಮೀಟಿದ್ದು ಅದರ ಮುಂಭಾಗದ ಡೋರ್ ಕಿತ್ತುಬಂದಿದೆ, ಆದರೆ ಹಣ ಪಡೆದಿರುವ ನಿದರ್ಶನ ಕಂಡುಬಂದಿಲ್ಲ.ಕಾರಾಗೃಹ, ಗೃಹರಕ್ಷಕ ದಳ, ಜಿಲ್ಲಾಡಳಿತ ಭವನ ಸೇರಿದಂತೆ ಶಿಡ್ಲಘಟ್ಟಕ್ಕೆ ತೆರಳುವ ಈ ಮುಖ್ಯ ರಸ್ತೆಯಲ್ಲಿ ರಾತ್ರಿ ಇಡೀ ವಾಹನ ಸಂಚಾರ ಇದ್ದೇ ಇರುತ್ತದೆ. ಇಂತಹ ಪ್ರದೇಶದಲ್ಲೇ ಕಳ್ಳರು ಕೈಚಳಕ ತೋರಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ. ಎಟಿಎಂ ದರೋಡೆ ನಡೆಸಲು ಬಂದಿದ್ದ ಕಳ್ಳರು ಎಟಿಎಂಗೆ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಕಿತ್ತೊಯ್ದಿದ್ದಾರೆ, ಅಲ್ಲದೆ ಕ್ಯಾಮರಾದಲ್ಲಿನ ರೆಕಾರ್ಡ್‍ ಪೋರ್ಟ್ ಹೊತ್ತೊಯ್ದು ಯಾವುದೇ ಸಾಕ್ಷ್ಯ ಸಿಗದಂತೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ 11 ರವರೆವಿಗೂ ಸೆಕ್ಯುರಿಟಿಗಾರ್ಡ್ ಇದ್ದನಾದರೂ ನಂತರ ಅರ್ಧಬಾಗಿಲು ಮುಚ್ಚಿ ಮನೆಗೆ ತೆರಳಿದ್ದಾನೆ. ಆತನ ನಿರ್ಲಕ್ಷವೂ ಇದಕ್ಕೆ ಕಾರಣ ಇದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.  ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಂದ ಸೆಕ್ಯೂರಿಟಿ ಗಾರ್ಡ್ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.   ಸ್ಥಳಕ್ಕೆ ಎಸ್ಪಿ ಕಾರ್ತಿಕ್‍ರೆಡ್ಡಿ, ಡಿವೈಎಸ್ಪಿ ಪುರುಷೋತ್ತಮ್, ನಗರಪೊಲೀಸ್ ಸಬ್ ಇನ್ಸ್‍ಫೆಕ್ಟರ್ ರಾಮಪ್ರಸಾದ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲೆಯ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಇಂಥಹ ಕಳವು ಯತ್ನಗಳು ಪದೇ ಪದೇ ನಡೆಯುತ್ತಿರುವುದು ಇಲ್ಲಿನ ಪೊಲೀಸ್ ವೈಫಲ್ಯತೆಗೆ ಸಾಕ್ಷಿ ಎಂಬುದನ್ನು ಅಲ್ಲಗೆಳೆಯುವಂತ್ತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin