ಪಂಜಾಬ್‍ನಲ್ಲಿ ಹೊತ್ತಿ ಉರಿದ ಖಾಸಗಿ ಬಸ್ : ಮೂವರು ಸುಟ್ಟು ಕರಕಲು

ಈ ಸುದ್ದಿಯನ್ನು ಶೇರ್ ಮಾಡಿ

Bus-Fire

ಬಟಿಂಡಾ, ಮೇ 14-ಖಾಸಗಿ ಬಸ್ಸೊಂದಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದು ಮೂವರು ಪ್ರಯಾಣಿಕರು ಸಜೀವ ದಹನಗೊಂಡ ದಾರುಣ ಭಟನೆ ನಿನ್ನೆ ರಾತ್ರಿ ಪಂಜಾಬ್‍ನ ಬಟಿಂಡಾ ಜಿಲ್ಲೆಯಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ 23 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಬಟಿಂಡಾದಿಂದ ಲೂಧಿಯಾನಾಗೆ ತೆರಳುತ್ತಿದ್ದ ರೈಯಾ ಟ್ರಾನ್ಸ್‍ಪೋರ್ಟ್ ಕಂಪನಿಗೆ(ಆರ್‍ಟಸಿ) ಸೇರಿದ ಹವಾನಿಯಂತ್ರಿತ ಐಷಾರಾಮಿ ಬಸ್ಸಿನ ಹಿಂಭಾಗದಲ್ಲಿದ್ದ ಎಂಜಿನ್‍ನಲ್ಲಿ ರಾಮ್‍ಪುರ ಫುಲ್ ಬಳಿ ಬೆಂಕಿ ಕಾಣಿಸಿಕೊಂಡಿತು.



ಕೇವಲ 20 ಸೆಕೆಂಡ್‍ಗಳಲ್ಲೇ ಬೆಂಕಿ ಇಡೀ ಬಸ್ಸನ್ನು ಆವರಿಸಿತು. ಈ ದುರಂತದಲ್ಲಿ ಮೂವರು ಸುಟ್ಟು ಕರಕಲಾದರು. ಇತರ 23 ಮಂದಿಗೆ ಸುಟ್ಟ ಗಾಯಗಳಾಗಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ವಾಹನಗಳೊಂದಿಗೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin