ಬೆಂಗಳೂರಲ್ಲಿ ಒಬ್ಬಳು ಮಾತ್ರೆ ಸೇವಿಸಿ ಆತ್ಮಹತ್ಯೆ, ಮತ್ತೊಬ್ಬ ಚಾಕು ಚುಚ್ಚಿಕೊಂಡು ಸಾವಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

poison--suicide

ಬೆಂಗಳೂರು, ಮೇ 14-ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿ ಮಹಿಳೆ ಮೃತಪಟ್ಟಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಮಲನಗರದ 11ನೇ ಮುಖ್ಯರಸ್ತೆ, 4ನೇ ಕ್ರಾಸ್ ನಿವಾಸಿ ಮಂಜುಳ(37) ಮೃತಪಟ್ಟ ಮಹಿಳೆ. ಬೇಸಿಗೆ ರಜಾಕ್ಕೆ ಇಬ್ಬರು ಮಕ್ಕಳೊಂದಿಗೆ ಕೆ.ಆರ್.ಪೇಟೆಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದ ಮಂಜುಳ ಅವರು ನಿನ್ನೆ ಮನೆಗೆ ವಾಪಸ್ಸಾಗಿದ್ದರು.   ಆಟೋ ಚಾಲಕರಾಗಿರುವ ಪತಿ ಸುರೇಶ್ ನಿನ್ನೆ ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ.ಈ ವೇಳೆ ಊಟಕ್ಕೆ ಚೌಚೌ ತರಲು ಮಂಜುಳ ಹೇಳಿದ್ದರಿಂದ ಪತಿ ಅಂಗಡಿಗೆ ಹೋಗಿದ್ದರು. ಈ ವೇಳೆ ಮಂಜುಳ ಅತಿಯಾದ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದ್ದರಿಂದ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು. ಅಂಗಡಿಯಿಂದ ಮನೆಗೆ ಬಂದ ಸುರೇಶ್ ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಂಜುಳಾ ಅವರಿಗೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು ಎಂದು ಹೇಳಲಾಗಿದ್ದು , ಅತಿಯಾದ ಮಾತ್ರೆ ಸೇವನೆಗೆ ಕಾರಣ ತಿಳಿದುಬಂದಿಲ್ಲ. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಚಾಕು ಚುಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ :

ಬೆಂಗಳೂರು, ಮೇ 14-ವ್ಯಕ್ತಿಯೊಬ್ಬ ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಶೆಟ್ಟಿಹಳ್ಳಿ ಲೇಔಟ್‍ನ ಭೂಸಂದ್ರ ನಿವಾಸಿ ಬೆಂಜಮಿನ್(48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಡಿತದ ಚಟ ಹೊಂದಿದ್ದ ಈತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದ್ದು , ರಾತ್ರಿ ಮನೆಯಲ್ಲಿ ಚಾಕುನಿಂದ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದುಬಂದಿಲ್ಲ. ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin