‘ಮಮತಾ ಸಮುದ್ರಕ್ಕೆ ಹಾರಲಿ’ : ಸಚಿವ ಅನಿಲ್ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Mamata-Banarjee

ಚಂಡಿಗಢ, ಮೇ 14-ಭಾರತದಲ್ಲಿ ಹುಟ್ಟಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದಿತ ಹೇಳಿಕೆಗೆ ಹರ್ಯಾಣ ಕ್ರೀಡಾ ಸಚಿವ ಮತ್ತು ಬಿಜೆಪಿ ಮುಖಂಡ ಅನಿಲ್ ವಿಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ನಾಚಿಕೆ ಆಗುವುದಿದ್ದರೆ ಅವರು ಸಮುದ್ರಕ್ಕೆ ಹಾರಲಿ ಎಂದು ಅನಿಲ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   ಭಾರತದಲ್ಲಿ ಹುಟ್ಟಿರುವುದಕ್ಕೆ ಅವರಿಗೆ ನಾಚಿಕೆಯಾಗುವುದಿದ್ದಲ್ಲಿ ಅವರೇಕೆ ಸಮುದ್ರಕ್ಕೆ ಹಾರಬಾರದು. ಕೊಲ್ಕತ್ತಾ ಸಮೀಪದಲ್ಲೇ ಸಮುದ್ರ ಇದೆ. ಮಮತಾ ನೀರಿಗೆ ಹಾರಬೇಕು ಎಂದು ಅವರು ಕಟುವಾಗಿ ವ್ಯಂಗ್ಯವಾಡಿದ್ದಾರೆ.ಧರ್ಮದ ಹೆಸರಿನಲ್ಲಿ ಜನರು ಹಿಂಸಾಚಾರದಲ್ಲಿ ತೊಡಗಿರುವ ಭಾರತದಲ್ಲಿ ಹುಟ್ಟಿರುವುದಕ್ಕೆ ನಾಚಿಕೆ ಎನಿಸುತ್ತದೆ. ಎಲ್ಲ ಧರ್ಮಗಳ ಗುಂಪುಗಳು ಸಾಮರಸ್ಯದಿಂದ ಇರಬೇಕು. ಪರಸ್ಪರ ಶಸ್ತ್ರಾಸ್ತ್ರಗಳನ್ನು ಎತ್ತಬಾರದು ಎಂದು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹೇಳಿದ್ದರು. ಅವರು ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.   ಮಮತಾ ಹೇಳಿಕೆಯನ್ನು ಟೀಕಿಸಿದ್ದ ಬಿಜೆಪಿ ಧುರೀಣರು, ಮತ ಹಾಕಿ ಅಧಿಕಾರಕ್ಕೆ ತಂದ ಜನರನ್ನೇ ಮುಖ್ಯಮಂತ್ರಿ ಅಪಮಾನ ಮಾಡಿದ್ದಾರೆ ಎಂದು ಅಪಾದಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin