ರಸ್ತೆ ಅಪಘಾತ : ರಾಜ್ಯದಲ್ಲಿ 2015ರಲ್ಲಿ 13,028 ಸಾವು, ಇದರಲ್ಲಿ ಶೇ. 40ರಷ್ಟು ದ್ವಿಚಕ್ರ ವಾಹನ ಸವಾರರು..!

ಈ ಸುದ್ದಿಯನ್ನು ಶೇರ್ ಮಾಡಿ

Acciddnt

ಬೆಂಗಳೂರು, ಮೇ 14-ರಾಜ್ಯದಲ್ಲಿ 2015ರಲ್ಲಿ ರಸ್ತೆ ಅಪಘಾತಗಳಲ್ಲಿ 13,028 ಮಂದಿ ಬಲಿಯಾಗಿದ್ದು, ಇವರಲ್ಲಿ ಮೃತಪಟ್ಟ ದ್ವಿಚಕ್ರ ವಾಹನ ಸವಾರರ ಪ್ರಮಾಣ ಶೇ. 40ರಷ್ಟು. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ನಿಮ್ಹಾನ್ಸ್) ಮತ್ತು ಸುರಕ್ಷತಾ ಸಂಪರ್ಕ ಸಂಸ್ಥೆ ಅಂಡರ್‍ರೈಟರ್ಸ್ ಲ್ಯಾಬೋರೇಟರೀಸ್ (ಯುಎಲ್) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಆತಂಕಕಾರಿ ಅಂಕಿ-ಅಂಶಗಳಿದ್ದು, ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಎಚ್ಚರಕೆ ಗಂಟೆಯಾಗಿದೆ.ವಿಶ್ವಸಂಸ್ಥೆಯ ನಾಲ್ಕನೇ ಜಾಗತಿಕ ರಸ್ತೆ ಸುರಕ್ಷತಾ ಸಪ್ತಾಹ (ಮೇ 8-14) ಅಂಗವಾಗಿ ಸಾರಿಗೆ ಸಚಿವ ಆರ್.ರಾಮಲಿಂಗಾ ರೆಡ್ಡಿ ಅವರು ಶುಕ್ರವಾರ ಬಿಡುಗಡೆ ಮಾಡಿದ ಈ ವರದಿಯಲ್ಲಿ ಅಪಘಾತಗಳು ಮತ್ತು ವಾಹನಗಳ ಕುರಿತು ಅಂಕಿ ಅಂಶಗಳನ್ನು ನೀಡಲಾಗಿದೆ.  ಕರ್ನಾಟಕದಲ್ಲಿ ನೋಂದಣಿಯಾದ ಒಟ್ಟು ವಾಹನಗಳಲ್ಲಿ ಶೇ. 72ರಷ್ಟು ದ್ವಿಚಕ್ರವಾಹನಗಳಿವೆ. 2020ರ ವೇಳೆಗೆ ಅಪಘಾತ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡಲು ವಿಶ್ವಸಂಸ್ಥೆ ಸಲಹೆ ಮಾಡಿದೆ.   ದೇಶಾದ್ಯಂತ ಇದೇ ವೇಳೆಯಲ್ಲಿ 1,50,000 ಸಾವುಗಳು ಸಂಭವಿಸಿದ್ದು, ಇದರಿಂದ 60,000 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin