ಚಾಮುಂಡಿ ಬೆಟ್ಟದಲ್ಲಿ ಹಾವಿನ ಹಾವಳಿ, ಸಾರ್ವಜನಿಕರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Chamundi-Hills

ಮೈಸೂರು,ಮೇ 15- ಇತ್ತೀಚೆಗೆ ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಹಾವಿನ ಕಾಟ ಹೆಚ್ಚಾಗಿದ್ದು , ಇಲ್ಲಿಗೆ ಬರುವ ಪ್ರವಾಸಿಗಳು ಮತ್ತು ಭಕ್ತಾಧಿಗಳು ಅತಂಕಕ್ಕೊಳಗಾಗಿದ್ದಾರೆ. ನಿನ್ನೆ ಸಂಜೆ ಚಾಮುಂಡಿ ಬೆಟ್ಟದ ಪೊಲೀಸ್ ಠಾಣೆ ಬಳಿ ಹಾವೊಂದು ಕಾಣಿಸಿಕೊಂಡು ಜನ ಬೆದರಿದ್ದಾರೆ. ಈ ವಿಷಯ ತಿಳಿದ ಸ್ಥಳೀಯ ನಿವಾಸಿ ಮುರುಗೇಶ್ ಅವರು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಈ ನಡುವೆ ಹಾವುಗಳ ಹಾವಳಿ ಜಾಸ್ತಿಯಾಗಿದ್ದು , ಭಕ್ತಾಧಿಗಳು ಭಯದಿಂದ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಸುಮಾರು ಎಂಟು-ಹತ್ತು ಹಾವುಗಳನ್ನು ಈ ಭಾಗದಲ್ಲಿ ಹಿಡಿಯಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin