ನಕ್ಸಲರೊಂದಿಗೆ ಗುಂಡಿನ ಚಕಮಕಿಯಲ್ಲಿ ಓರ್ವ ಎಸ್‍ಟಿಎಫ್ ಯೋಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Naxal

ರಾಯ್‍ಪುರ್, ಮೇ 15-ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ನಿನ್ನೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ತೀವ್ರ ಗಾಯಗೊಂಡಿದ್ದ ವಿಶೇಷ ಕಾರ್ಯ ಪಡೆ (ಎಸ್‍ಟಿಎಫ್) ಯೋಧ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಗುಂಡೇಟಿನಿಂದ ಶೋಚನೀಯ ಸ್ಥಿತಿಯಲ್ಲಿದ್ದ ಕಾನ್ಸ್‍ಟೆಬಲ್ ಶಲಭ್ ಉಪಾಧ್ಯಾಯ ಅವರನ್ನು ಚಿಕಿತ್ಸೆಗಾಗಿ ಬಸಗುಡ ಪ್ರದೇಶದಿಂದ ಹೆಲಿಕಾಪ್ಟರ್‍ನಲ್ಲಿ ಕರೆತರುವಾಗ ಸಾವನ್ನಪ್ಪಿದರು ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ (ದಂತೇವಾಡ ಪ್ರಾಂತ್ಯ) ಪಿ. ಸುಂದರ್‍ರಾಜ್ ತಿಳಿಸಿದ್ದಾರೆ. ಬಸಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ಎನ್‍ಕೌಂಟರ್‍ನಲ್ಲಿ ಉಪಾಧ್ಯಾಯ ಅವರ ತಲೆಗೆ ಭಾರೀ ಗುಂಡೇಟು ತಗುಲಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin