ಪ್ಲೇಓವರ್‍ನಿಂದ ಕಾರು ಕೆಳಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

car

ನವದೆಹಲಿ, ಮೇ 15- ಜೀವನದ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವುದಕ್ಕಾಗಿ ಪರೀಕ್ಷೆ ಬರೆಯಲು ಹೊರಟಿದ್ದವರು ಇಹಲೋಕ ತ್ಯಜಿಸಿರುವ ಘಟನೆ ಪಂಜಾಬಿ ಬಾಗ್‍ನಲ್ಲಿ ಸಂಭವಿಸಿದೆ.  ಇಂದು ಬೆಳಗ್ಗೆ 9 ಗಂಟೆಗೆ ಎಐಐಎಂಎಸ್ ಪರೀಕ್ಷೆ ಬರೆಯಲು ತನ್ನ ಸ್ನೇಹಿತರೊಂದಿಗೆ ಕಾರ್‍ನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ಲೇಓವರ್‍ನಿಂದ ಕೆಳಗೆ ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ ಒಬ್ಬ ಯುವತಿ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಮೃತಪಟ್ಟವರನ್ನು ರಜಾತ್ ಮತ್ತು ರೀತು ಎಂದು ಗುರುತಿಸಲಾಗಿದೆ.


ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಜಾಬಿ ಭಾಗ್ ಠಾಣೆ ಪೊಲೀಸರು ಗಾಯಗೊಂಡವರನ್ನು ಮಹಾವೀರ್ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಈ ವಿದ್ಯಾರ್ಥಿಗಳು ಎಐಐಎಂಎಸ್ ಪರೀಕ್ಷೆ ಬರೆಯಲು ಪಶ್ಚಿಮ ದೆಹಲಿಯ ನೇರಳಾದಿಂದ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮತ್ತು ಕಾರಿನಲ್ಲಿದ್ದವರೆಲ್ಲರೂ 18-20 ವರ್ಷದವರೆಂದು ತಿಳಿಸಿದ್ದಾರೆ.

ಟಾಫ್ರಿಕ್ ಜಾಮ್:
ಸದಾ ವಾಹನಗಳ ಜಂಜಾಟದಿಂದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಇಂದು ಈ ಅಪಘಾತ ಸಂಭವಿಸಿದ್ದರಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ಅಸ್ತವ್ಯಸ್ಥ ಉಂಟಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin