ಇಬ್ಬರು ಮಕ್ಕಳ ಜೊತೆ ತಾಯಿ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

missing

ಬೆಂಗಳೂರು, ಮೇ 15- ಯಶವಂತಪುರದಲ್ಲಿನ ಮನೆಯಿಂದ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋದ ತಾಯಿ ನಾಪತ್ತೆಯಾಗಿದ್ದು, ಇವರ ಸುಳಿವಿದ್ದಲ್ಲಿ ಕೂಡಲೇ ಸಮೀಪದ ಠಾಣೆಗಾಗಲೀ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ತಿಳಿಸಲು ಕೋರಲಾಗಿದೆ. ಯಶವಂತಪುರದ ಕೆ.ಎನ್.ಬಡಾವಣೆಯ 5ನೇ ಕ್ರಾಸ್ ನಿವಾಸಿ ಸತೀಶ್ ಎಂಬುವರ ಪತ್ನಿ ಕಲ್ಪನಾ(32), ಒಂದೂವರೆ ವರ್ಷದ ಕಿರಣ್ ಕೃಷ್ಣ ಹಾಗೂ ಪ್ರಿಯಾ(13) ಎಂಬ ಮಕ್ಕಳನ್ನು ಕರೆದುಕೊಂಡು ಏ.18ರಂದು ಹೊರಗೆ ಹೋಗಿದ್ದು, ವಾಪಸ್ ಹಿಂದಿರುಗಿಲ್ಲ.   ಸಂಬಂಧಿಕರು, ಸ್ನೇಹಿತರನ್ನೆಲ್ಲಾ ವಿಚಾರಿಸಿದರೂ ಇವರ ಸುಳಿವು ಪತ್ತೆಯಾಗಿಲ್ಲ. ಈ ಮೂವರ ಸುಳಿವು ಇದ್ದರೆ ಕೂಡಲ್ ದೂ.ಸಂ.22942526ಗೆ ಕರೆ ಮಾಡಲು ಸೂಚಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin