ವ್ಯಕ್ತಿಯೊಬ್ಬನನ್ನು ಕೊಂದು ಪಾಯದ ಮಣ್ಣಲ್ಲಿ ಶವ ಹೂತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

3-Arrested

ಬೆಂಗಳೂರು, ಮೇ 15-ಹಣಕಾಸಿನ ವಿಚಾರಕ್ಕೆ ಕಟ್ಟಡ ಕಾರ್ಮಿಕನನ್ನು ಕೊಂದು ಪಾಯದ ಮಣ್ಣಲ್ಲಿ ಶವ ಹೂತು ಜಾರ್ಖಂಡ್‍ಗೆ ಪರಾರಿಯಾಗಿದ್ದ ಮೂವರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಜಾರ್ಖಂಡ್‍ನ ಮಂಗ್ರೋಮೆಹತಾ ಅಲಿಯಾಸ್ ಮುಂಗುಡು(32), ಗೋನೋರಾಯ್ ಅಲಿಯಾಸ್ ಗಿನ್ನು (42) ಮತ್ತು ಬೈಜ್ಯನಾಥ್ ಕೋಲ್(45) ಬಂಧಿತ ಹಂತಕರು.  ಕ್ಲಾಸಿಕ್ ಆರ್ಚಿಡ್ ಲೇಔಟ್‍ನ ಖಾಲಿ ನಿವೇಶನವೊಂದರಲ್ಲಿ ಪಾಯದ ಮಣ್ಣಲ್ಲಿ ಏ.1ರಂದು ಹೂತಿದ್ದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುಟ್ಟೇನಹಳ್ಳಿ ಪೊಲೀಸರ ಒಂದು ತಂಡ ಜಾರ್ಖಂಡ್ ತೆರಳಿ ತನಿಖೆ ನಡೆಸಿದಾಗ ಮೃತ ವ್ಯಕ್ತಿ ಜಾರ್ಖಂಡ್ ರಾಜ್ಯದ ಸಹದೇವ್‍ರಾಯ್(30) ಎಂದು ಗುರುತು ಪತ್ತೆಯಾಗಿದೆ.ಅಲ್ಲಿನವರೇ ಆದ ಆರೋಪಿಗಳು ಹಣಕಾಸಿನ ಸಹದೇವ್‍ನನ್ನು ಸಿಮೆಂಟ್ ಮೋಲ್ಡ್ ಪೀಸನ್ನು ತಲೆ, ಮುಖದ ಮೇಲೆ ಎತ್ತಿ ಹಾಕಿ ಕೊಂಡು ಪಾಯದ ಮಣ್ಣಲ್ಲೇ ಶವ ಹೂತು ತಮ್ಮ ರಾಜ್ಯಕ್ಕೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಡಿಸಿಪಿ ಡಾ.ಶರಣಪ್ಪ ಅವರ ಮಾರ್ಗದರ್ಶನ, ಎಸಿಪಿ ಮಂಜುನಾಥ ಚೌದರಿ ಅವರ ನೇತೃತ್ವದಲ್ಲಿ ರಚನೆಗೊಂಡ ತಂಡ ಪುಟ್ಟೇನಹಳ್ಳೀ ಠಾಣೆ ಇನ್ಸ್‍ಪೆಕ್ಟರ್ ಟಿ.ಎಂ.ಧರ್ಮೇಂದ್ರ ಮತ್ತು ಸಿಬ್ಬಂದಿ ಒಳಗೊಂಡ ತಂಡ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳಣ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin